For Quick Alerts
ALLOW NOTIFICATIONS  
For Daily Alerts

ಅತೀ ಕಡಿಮೆ ಅವಧಿಯಲ್ಲಿ ತೆಳ್ಳಗಾಗುವ ಪ್ರಯತ್ನ ಬೇಡ!

By Super
|

ಬೇಗ ಬೇಗ ತೂಕ ಇಳಿಸಿಕೊಳ್ಳಬೇಕು ಅನ್ನೋದು ಪ್ರತಿಯೊಬ್ಬರಲ್ಲೂ ಗುಪ್ತ ಗಾಮಿನಿಯಂಥಿರುವ ಬಯಕೆ. ಡಿಸೆಂಬರ್ ತಿಂಗಳಲ್ಲಿ ಮಜಾ ಉಡಾಯಿಸಿ ಹೊಸ ವರ್ಷ ಕಾಲಿಡುತ್ತಿದ್ದ ಹಾಗೇ ಹೆಚ್ಚಿನ ತೂಕ ಇಳಿಸಿಕೊಳ್ಳುವುದಕ್ಕೆ ಎಲ್ಲ ಕಣ್ಣು ಹಾಯಿಸುವುದು- 30 ದಿನಗಳಲ್ಲಿ ತೂಕ ಇಳಿಸಿ ಎನ್ನೋ ಪೋಸ್ಟರ್ ಕಡೆಗೆ.

ಇಂಥ ಪೋಸ್ಟರ್ ಗಳು ನಿಮ್ಮನ್ನು ಫಟಾಫಟ್ ತೂಕ ಕಡಿಮೆ ಮಾಡಿಕೊಳ್ಳಲು ಉತ್ತೇಜಿಸಬಹುದು. ಆದರೆ ಫಟಾಫಟ್ ತೂಕ ಇಳಿಸೋದ್ರಿಂದ ಆಗೋ ಸಮಸ್ಯೆಗಳು ಒಂದೆರಡಲ್ಲ. ಬರೀ ದೈಹಿಕ ತೊಂದರೆಗಳು ಮಾತ್ರವಲ್ಲ- ಮಾನಸಿಕ ಒತ್ತಡ, ಖಿನ್ನತೆ ಮುಂತಾದ ಸಮಸ್ಯೆಗಳೂ ಕಾಡೋದು ಗ್ಯಾರಂಟಿ. ಹೀಗಾಗಿ ವೇಗವಾಗಿ ತೂಕ ಇಳಿಸಿಕೊಳ್ಳುವ ಸಲಹೆಗಳತ್ತ ಕಣ್ಣು ನೆಡುವ ಮೊದಲು ಅದರಿಂದಾಗೋ ಸೈಡ್ ಇಫೆಕ್ಟ್ ಗಳತ್ತ ನೋಡಿ:

1. ವೇಗವಾಗಿ ಸಣ್ಣಗಾಗುವುದು ಖಾಯಂ ಪರಿಹಾರವಲ್ಲ

1. ವೇಗವಾಗಿ ಸಣ್ಣಗಾಗುವುದು ಖಾಯಂ ಪರಿಹಾರವಲ್ಲ

ಮುಂಬೈನ ಆಹಾರ ತಜ್ಞೆ ಪ್ರಿಯಾ ಹೇಳುವ ಪ್ರಕಾರ: ವೇಗವಾಗಿ ತೂಕ ಕಳೆದುಕೊಳ್ಳುವ ರೀತಿಗಳನ್ನು ಅಳವಡಿಸಿಕೊಳ್ಳೋ ಮುಂಚೆ ಎಚ್ಚರವಾಗಿರಬೇಕು. ಒಮ್ಮೆ ತೂಕ ಇಳಿಯಬಹುದು, ಆದರೆ ಬಹಳ ಸಮಯದವರೆಗೆ ಇದು ಸಾಗೋದಿಲ್ಲ. ತಾತ್ಕಾಲಿಕ ಬದಲಾವಣೆಗಳಿಗೆ ನಿಮ್ಮ ದೇಹ ಒಗ್ಗಿಕೊಳ್ಳದಿದ್ದರೆ ಅಳವಡಿಸಿಕೊಂಡ ಪದ್ದತಿಗಳೆಲ್ಲ ಹಾಳಾಗಿ ಎಷ್ಟು ತೂಕ ಕಳೆದುಕೊಂಡಿದ್ದೀರೋ ಅದರ ದುಪ್ಪಟ್ಟು ತೂಕ ಹೆಚ್ಚಾಗಬಹುದು.

2. ಏಕಾಏಕಿ ಸಣ್ಣಗಾದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು

2. ಏಕಾಏಕಿ ಸಣ್ಣಗಾದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು

ಏಕಾಏಕಿ ದೇಹದ ಕೆಲವು ಪೌಂಡ್ ಗಳನ್ನು ಕಡಿಮೆ ಮಾಡಿಕೊಳ್ಳವುದಕ್ಕೆ ಪ್ರಸಿದ್ದ ಸೂತ್ರವೆಂದರೆ ದೇಹದ ನೀರಿನಂಶ ಕಡಿಮೆ ಮಾಡಿಕೊಳ್ಳುವ ತಂತ್ರ. ದೇಹದಲ್ಲಿ ತೂಕದ ಹೆಚ್ಚಿನ ಭಾಗ ಆವರಿಸಿರುವುದು ನೀರು. ಹೀಗಾಗಿ ನೀರನ್ನು ಒಣಗಿಸಿಕೊಂಡು ತೂಕ ಇಳಿಸಿಕೊಳ್ಳುತ್ತಾರೆ. ಆದರೆ ಇದು ದೇಹಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ನೀರನ್ನು ಒಣಗಿಸಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಬಲಹೀನತೆ, ಬವಳಿ ಬರುವಿಕೆ, ತಲೆ ಸುತ್ತುವಿಕೆ, ಹೃದಯ ಬಡಿತ ಹೆಚ್ಚಾಗುವಿಕೆಯಂಥ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಮಾಂಸಖಂಡಗಳಿಗೆ ತೊಂದರೆಯಾಗಿ ಸಾವಿಗೂ ಕಾರಣವಾಗಬಹುದು.

ಇದರ ಜೊತೆಗೆ ನಿಮ್ಮ ಹಳೆಯ ತೂಕಕ್ಕೆ ಮರಳಿಬಿಡುವ ಸಾಧ್ಯತೆಯೂ ಇದೆ.

3. ನಿದ್ರೆಯ ಕೊರತೆ

3. ನಿದ್ರೆಯ ಕೊರತೆ

ಅಪರೂಪಕ್ಕೆ ವೇಗವಾಗಿ ತೂಕ ಇಳಿಕೆಯಾದರೆ ಸುಸ್ತಾಗುತ್ತದೆ. ತೂಕ ಇಳಿಸುವ ಯೋಜನೆಗೆ ಕೈ ಹಾಕಿದರೆ ಬಹಳಷ್ಟು ಮಂದಿ ತೆಗೆದುಕೊಳ್ಳುವ ಆಹಾರವನ್ನು ಕ್ಯಾಲೋರಿಯನ್ನು ಕಡಿಮೆ ಮಾಡುತ್ತಾರೆ. ಆದರೆ ಬೊಜ್ಜು ಕರಗಿಸಲು ಮುಂದಾಗುವುದಿಲ್ಲ. ಕಡಿಮೆ ಕ್ಯಾಲೋರಿಯ ಪದಾರ್ಥ ತೆಗೆದುಕೊಂಡರೆ ಚಯಾಪಚಯ ಕ್ರಿಯೆ ಕುಂಠಿತಗೊಳ್ಳುತ್ತದೆ. ಅಂದ್ರೆ ಕಡಿಮೆ ತಾಕತ್ತಿನಿಂದಾಗಿ ಬೇಗ ಸುಸ್ತಾಗುತ್ತದೆ.

4. ಪಿತ್ತಕೋಶದಲ್ಲಿ ಕಲ್ಲು

4. ಪಿತ್ತಕೋಶದಲ್ಲಿ ಕಲ್ಲು

ನಿಮ್ಮ ಉದರ ಭಾಗದಲ್ಲಿ ಪಿತ್ತಕೋಶವಿದ್ದು ಲಿವರ್ ನ ಕೆಳಭಾಗದಲ್ಲಿರುತ್ತದೆ. ಈ ಪಿತ್ತಕೋಶಧಲ್ಲಿ ಹೆಚ್ಚಿನ ಕೊಬ್ಬು ಬೇಕಾಗುವ ತನಕ ಶೇಖರಣೆಯಾಗಿರುತ್ತದೆ. ಪದೇ ಪದೇ ತೂಕ ಇಳಿಸುವುದರಿಂದ ಪಿತ್ತಕೋಶದಲ್ಲಿ ಕಲ್ಲು ಉಂಟಾಗುವ ಸಾದ್ಯತೆಯಿದೆ. ಕೊಲೆಸ್ಟ್ರಾಲ್ ಗಟ್ಟಿಗೊಂಡು ಕಲ್ಲಿನ ರೂಪ ತಾಳುತ್ತದೆ. ಈ ಸಣ್ಣ ಗಾತ್ರದ ಕಲ್ಲುಗಳು ದೇಹಕ್ಕೆ ತೊಂದರೆ ತಂದಿಡುತ್ತವೆ.

5. ಪೌಷ್ಟಿಕಾಂಶದ ಕೊರತೆ

5. ಪೌಷ್ಟಿಕಾಂಶದ ಕೊರತೆ

ವೇಗವಾಗಿ ತೂಕ ಇಳಿಸಿಕೊಳ್ಳುವುದಕ್ಕೆ ಪ್ಲ್ಯಾನ್ ಮಾಡಿದ ಮೇಲೆ ಕೆಲವೇ ಕೆಲವು ಆಹಾರಗಳಿಗೆ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳುತ್ತೀರಿ. ಇದರಿಂದಾಗಿ ದೇಹಕ್ಕೆ ಪೌಷ್ಟಿಕಾಂಶದ ಕೊರತೆ ಕಾಣಿಸಿಕೊಳ್ಳುತ್ತದೆ.

6. ಮಾನಸಿಕ ಒತ್ತಡ ಹೆಚ್ಚಿಸಿಕೊಳ್ಳುತ್ತಿದ್ದೀರಿ

6. ಮಾನಸಿಕ ಒತ್ತಡ ಹೆಚ್ಚಿಸಿಕೊಳ್ಳುತ್ತಿದ್ದೀರಿ

ಕೆಲವೊಂದು ಪೌಷ್ಟಿಕ ಆಹಾರಗಳಿಂದ ದೂರ ಉಳಿಯುವುದರಿಂದ ಚಯಾಪಚಯ ಕ್ರಿಯೆ ಮೇಲೆ ದುಷ್ಪರಿಣಾಮ ಬೀರಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಿಸುತ್ತದೆ. ಈ ಹಾರ್ಮೋನ್ ಹೆಚ್ಚಳದಿಂದ ನೀವು ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಒತ್ತಡಗಳಿಂದ ಬಳಲುತ್ತೀರಿ.

7. ಕೂದಲು ಉದುರುವಿಕೆ

7. ಕೂದಲು ಉದುರುವಿಕೆ

ತೂಕ ಇಳಿಸಿಕೊಳ್ಳುವ ವೇಗದಲ್ಲಿ ಪೌಷ್ಟಿಕತೆಯ ಕೊರತೆಯುಂಟಾಗಿ ಕೂದಲು ಉದುರುತ್ತದೆ. ಕೂದಲು ಬೆಳೆಯೋದಕ್ಕೆ ಪ್ರೋಟೀನ್ ಬೇಕು. ಡಯಟ್ ನಿಂದಾಗಿ ಪ್ರೋಟೀನ್ ಅಂಶ ಕೊರತೆಯಿಂದ ಕೂದಲು ಒಣಗುತ್ತದೆ, ಗಂಟಾಗಿ, ಕೂದಲು ಉದುರುತ್ತದೆ.

8. ಕೊಬ್ಬು ಶೇಖರಣೆ

8. ಕೊಬ್ಬು ಶೇಖರಣೆ

ನೀವು ಉಪವಾಸದ ಸಮಯದಲ್ಲಿ ಕೊಬ್ಬು ಕರಗಿಸೋದೇನೋ ಸತ್ಯ. ಆದರೆ ನಿಮ್ಮ ಹಳೆಯ ಆಹಾರ ಪದ್ದತಿಗೆ ಮರಳಿದಾಗ ತೂಕವೂ ಹಳೆಯದಕ್ಕೆ ಏರುತ್ತದೆ. ಜೊತೆಗೆ ಕೊಬ್ಬಿನಂಶವೂ ಹೆಚ್ಚಾಗುತ್ತದೆ.

9. ಜೀರ್ಣಕ್ರಿಯೆಗೆ ಪೆಟ್ಟು

9. ಜೀರ್ಣಕ್ರಿಯೆಗೆ ಪೆಟ್ಟು

ತೂಕ ಇಳಿಸುವ ಹೊತ್ತಿನಲ್ಲಿ ಜೀರ್ಣಕ್ರಿಯೆ ವೇಗವೂ ಕಡಿಮೆಯಾಗುತ್ತದೆ. ನಿಮ್ಮ ಹಳೆ ಆಹಾರ ಪದ್ದತಿಗೆ ಮರಳಿದಾಗ ನಿಧಾನಗೊಂಡ ಜೀರ್ಣಕ್ರಿಯೆಯಿಂದ ತೂಕ ಹೆಚ್ಚುವುದನ್ನು ಕಾಣುತ್ತೀರಿ.

10. ಹತ್ತಾರು ದೈಹಿಕ ಸಮಸ್ಯೆಗಳು

10. ಹತ್ತಾರು ದೈಹಿಕ ಸಮಸ್ಯೆಗಳು

ಪೌಷ್ಟಿಕಾಂಶದ ನ್ಯೂನ್ಯತೆಯಿಂದ ಮಾಂಸಖಂಡಗಳಿಗೆ ತೊಂದರೆ, ಅನೀಮಿಯಾ ಮುಂತಾದ ತೊಂದರೆಗಳು ಕಟ್ಟಿಟ್ಟ ಬುತ್ತಿ. ಇವುಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಹೋದರೆ ಮುಂದೆ ತೀವ್ರತರ ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತವೆ.

English summary

Top 10 risk Of Fast Weight Loss | Tips For Diet And Fitness | ದೇಹದ ತೂಕ ಬೇಗನೆ ಕಮ್ಮಿಯಾದರೆ ಸಮಸ್ಯೆ ಹತ್ತು ಹಲವಾರು | ಸಮತೂಕದ ಮೈಕಟ್ಟಿಗೆ ಕೆಲ ಸಲಹೆಗಳು

Fast weight loss may cause mental stress and depression as well. Therefore, before believing any fast weight loss advice, take a moment and have a look at the top 10 risks that fast weight loss brings with it.
X
Desktop Bottom Promotion