For Quick Alerts
ALLOW NOTIFICATIONS  
For Daily Alerts

ಪ್ರಾಣಿಗಳಲ್ಲಿರುವ ಈ ಗುಣ ನಮ್ಮಲ್ಲಿ ಇರಲ್ಲ ಏಕೆ?

By Super
|

ಸಾಕು ಪ್ರಾಣಿಗಳೆಂದರೆ ಹೆಸರೇ ಹೇಳುವಂತೆ ಎಲ್ಲರಿಗೂ ಪೆಟ್. ಮನೆಗಳಲ್ಲಿ ಸಣ್ಣದೊಂದು ಬೆಕ್ಕು ಅಥವಾ ನಾಯಿ ಇದ್ದರೆ ಮಗುವೊಂದು ಜೊತೆಗಿದ್ದಂತೆ.ಅವುಗಳು ಮಾಡುವ ಅನೇಕ ಚೇಷ್ಟೆಗಳು ಮುಖದಲ್ಲೊಂದು ನಗು ತರಿಸುತ್ತದೆ. ಅವು ತೋರಿಸುವ ನಿಷ್ಕಲ್ಮಶ ಪ್ರೀತಿ ಮನಸ್ಸನ್ನು ಮುದಗೊಳಿಸುತ್ತದೆ.

ಕೆಲವು ವಿಷಯಗಳಲ್ಲಿ ಮನುಷ್ಯರಿಗಿಂತ ಪ್ರಾಣಿಗಳು ಮೇಲು. ಪ್ರಾಣಿಗಳಲ್ಲಿ ಮನುಷ್ಯರಲ್ಲಿಲ್ಲದ ಸಾಕಷ್ಟು ಗುಣಗಳಿರುತ್ತವೆ.ಸಾಕು ಪ್ರಾಣಿಗಳನ್ನು ಕೇವಲ ಸಾಕುವುದು ಮಾತ್ರವಲ್ಲ ಅವುಗಳನ್ನು ನೋಡಿ ಕಲಿಯಬೇಕಾದದ್ದು ಕೂಡ ಸಾಕಷ್ಟಿದೆ. ನಾಯಿಯಲ್ಲಿರುವ ಪ್ರಾಮಾಣಿಕತೆ ಮನುಷ್ಯನಲ್ಲಿ ಇಲ್ಲ.ಬೆಕ್ಕಿನಲ್ಲಿರುವ ದೇಹ ಸ್ವಚ್ಚವಾಗಿ ಇಟ್ಟುಕೊಳ್ಳುವ ಗುಣವನ್ನು ಕೂಡ ನೋಡಿ ಕಲಿಯ ಬೇಕು.ಈಗ ಎಲ್ಲರ ಮನೆಗಳಲ್ಲೂ ಸಾಮಾನ್ಯವಾಗಿ ಒಂದು ಪೆಟ್ ಇದ್ದೇ ಇರುತ್ತದೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೂ ಆ ಕೆಲಸದಲ್ಲಿ ಅದು ಇಡುವ

ಶ್ರದ್ಧೆ ಮೆಚ್ಚಬೇಕಾದುದು.
ನಿಮ್ಮ ಮನೆಗಳಲ್ಲೂ ಸಾಕು ಪ್ರಾಣಿಗಳಿರಬಹುದು,ಅವುಗಳನ್ನು ನೀವು ಪ್ರೀತಿಯಿಂದ ಸಾಕುತ್ತಿರಬಹುದು.ಅವುಗಳನ್ನು ಗಮನಿಸಿ ಅವುಗಳಲ್ಲಿರುವ ಅನೇಕ ಗುಣಗಳು ನಿಮಗೆ ಸಹಾಯಕವಾಗಬಹುದು. ಮನಸ್ಸಿಗೆ ಖುಷಿ ನೀಡಬಹುದು. ಇಲ್ಲಿ ಸಾಕು ಪ್ರಾಣಿಗಳಿಂದ ಕಲಿಯಬಹುದಾದ ಕೆಲ ಗುಣಗಳ ಕುರಿತು ಹೇಳಿದ್ದೇವೆ.

ಬಹುಕಾರ್ಯ ಮರೆತುಬಿಡಿ

ಬಹುಕಾರ್ಯ ಮರೆತುಬಿಡಿ

ನಾಯಿಗಳಿಗೆ ಏನಾದರು ಒಂದು ಕೆಲಸವಿದ್ದರೆ ಅದು ಅದಕ್ಕೆ ಸಂಪೂರ್ಣ ಗಮನ ನೀಡುತ್ತದೆ.ಜನರು ಕೂಡ ಹಾಗೆಯೇ ಮಾಡಬೇಕು.ಸ್ಟ್ಯಾನ್ಫೋರ್ಡ್ ಸಂಶೋಧಕರ ಪ್ರಕಾರ ಒಂದೇ ಕೆಲಸದ ಮೇಲೆ ಗಮನ ಹರಿಸಿ ಕೆಲಸ ಮಾಡುವವರ ನೆನಪಿನ ಶಕ್ತಿ ಹೆಚ್ಚಿರುತ್ತದೆ ಮತ್ತು ಇಮೇಲ್,ವೆಬ್ ಸರ್ಫಿಂಗ್ ಇನ್ನಿತರ ಕೆಲಸಗಳನ್ನು ಒಟ್ಟಿಗೆ ಮಾಡುವವರಲ್ಲಿ ನೆನಪಿನ ಶಕ್ತಿ ಕಡಿಮೆ ಇರುತ್ತದೆ.ಇತರ ಆಧಾರಗಳ ಪ್ರಕಾರ ಯಾವ ವ್ಯಕ್ತಿ ಇಬ್ಬಗೆಯ ಕೆಲಸಗಳನ್ನು ಮಾಡುತ್ತಾರೋ ಅವರು ಸಮಯವನ್ನು ಕಳೆದುಕೊಳ್ಳುತ್ತಾರೆ.

ವಿಶ್ರಾಂತಿ ಪಡೆಯಿರಿ

ವಿಶ್ರಾಂತಿ ಪಡೆಯಿರಿ

ನಿಮ್ಮ ಸಾಕುಪ್ರಾಣಿ ಮುಂಜಾನೆಯಿಂದ ರಾತ್ರಿಯವರೆಗೆ ಕಣ್ಣು ಮುಚ್ಚದೆ ಇರುವುದನ್ನು ನೀವು ಕಾಣಲಾರಿರಿ.ಬೆಕ್ಕಿನ ನಿದ್ದೆ (ಸಣ್ಣ ನಿದ್ದೆ) ಮಾಡುವುದರಿಂದ ಮಾನವರಿಗೂ ಸಹಾಯವಿದೆ ಎಂದು ಆಧಾರಗಳು ತಿಳಿಸುತ್ತವೆ.ಅಧ್ಯಯನದ ಪ್ರಕಾರ ಪ್ರತಿದಿನ ವಿಶ್ರಾಂತಿ ಪಡೆಯುವ 24000 ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಶೇ. 37 ರಷ್ಟು ಕಡಿಮೆ ಇರುತ್ತವೆ.ಸಣ್ಣ ನಿದ್ದೆ ಮಾಡುವುದರಿಂದ ಎಚ್ಚರಿಕೆಯಿಂದ ಇರಲು ಮತ್ತು ಕೆಲಸವನ್ನು ಸರಿಯಾಗಿ ಮಾಡಲು ಅನುಕೂಲವಾಗುತ್ತದೆ.

ಪ್ರತಿದಿನ ವಾಕ್ ಮಾಡಿ

ಪ್ರತಿದಿನ ವಾಕ್ ಮಾಡಿ

ನಡಿಗೆ ನಿಮ್ಮ ಹೆಚ್ಚಿನ ಕ್ಯಾಲೋರಿಯನ್ನ್ನು ತಡೆಯುತ್ತದೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಇವುಗಳ ಬಗ್ಗೆ ಎಚ್ಚರ

ಇವುಗಳ ಬಗ್ಗೆ ಎಚ್ಚರ

ಖಿನ್ನತೆ ವಿರುದ್ಧ ಹೋರಾಡಿ.

ದೇಹ ತೂಕ ಕಡಿಮೆ ಮಾಡಿಕೊಳ್ಳಿ.

ಮದುಮೇಹ ಬರದಂತೆ ನೋಡಿಕೊಳ್ಳಿ.

ದೊಡ್ಡ ಕರುಳು ಮತ್ತು ಸ್ತನ ಕ್ಯಾನ್ಸರ್ ಬರದಂತೆ ತಡೆಯಿರಿ.

ಮೆದುಳನ್ನು ಬಲವಾಗಿರಿಸಿಕೊಳ್ಳಿ.

ಮನಸ್ಸನ್ನು ಯಾವಾಗಲು ಸರಿಯಾಗಿರಿಸಿಕೊಳ್ಳಿ.

ಸ್ನೇಹ ಬೆಳೆಸಿಕೊಳ್ಳಿ

ಸ್ನೇಹ ಬೆಳೆಸಿಕೊಳ್ಳಿ

ಪ್ರಾಣಿಗಳಿಗೆ ಅಥವಾ ಮಾನವರಿಗೆ ಗೆಳೆತನ ಮಾಡುವುದರಿಂದ ಅರೋಗ್ಯ ದೃಷ್ಟಿಯಿಂದ ಕೂಡ ಸಹಾಯವಿದೆ.ಆಸ್ಟ್ರೇಲಿಯಾದಲ್ಲಿ ನಡೆಸಿದ ಅಧ್ಯಯನದ ಪ್ರಕಾರ 10 ವರ್ಷಗಳ ಕಾಲ 1,500 ಜನರನ್ನು ಗಮನಿಸುತ್ತಿತ್ತು ಅದರಲ್ಲಿ ಸ್ನೇಹಿತರನ್ನು ಹೊಂದಿದ 22 %ದಷ್ಟು ಜನರು ಸಾವನ್ನು ನಿರಾಕರಿಸುತ್ತಿದ್ದರು ಮತ್ತು ಗೆಳೆಯರಿಲ್ಲದವರು ಸಾವನ್ನು ಎದುರುನೋಡುತ್ತಿರುವುದು ಸಾಬೀತಾಗಿದೆ.

ಆ ಕ್ಷಣವನ್ನು ಬದುಕಿ

ಆ ಕ್ಷಣವನ್ನು ಬದುಕಿ

ಆ ಕ್ಷಣಕ್ಕಾಗಿ ಬದುಕುವುದನ್ನು ನಾವು ಸಾಕುಪ್ರಾಣಿಗಳಿಂದ ಕಲಿಯಬೇಕು.ಹಾರ್ವರ್ಡ್ ಮನಶಾಸ್ತ್ರಜ್ಞರ ಪ್ರಕಾರ ಏಕಾಗ್ರಚಿತ್ತದಿಂದ ಮಾಡುವ ಕೆಲಸ ,ಉದಾಹರಣೆಗೆ ಸೆಕ್ಸ್ ಮತ್ತು ವ್ಯಾಯಾಮಗಳು ಇವುಗಳಿಂದ ಹೆಚ್ಚುಸಂತೋಷವಾಗಿರುತ್ತಾರೆ. ಮಾಡುತ್ತಿರುವ ಕೆಲಸದ ಬಗ್ಗೆ ಸಂಪೂರ್ಣ ಗಮನವಿರದೆ ಬೇರೆಯೇ ಯೋಜನೆ ಮಾಡುತ್ತಿರುವುದು,ಚಿಂತಿಸುವುದರಿಂದ ಸಂತೋಷ ಸಿಗಲಾರದು ಎನ್ನಲಾಗಿದೆ.

ದ್ವೇಷ ಬಿಟ್ಟುಬಿಡಿ

ದ್ವೇಷ ಬಿಟ್ಟುಬಿಡಿ

ಹಳೆಯದನ್ನು ಮರೆತುಬಿಡಿ ತಾಳ್ಮೆ ವಹಿಸಿ. ಹಳೆಯ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ನಿಮ್ಮ ಸಿಟ್ಟು ನಿಮ್ಮ ಶ್ವಾಸಕೋಶದ ಕಾರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಕ್ಷಮೆ ನೀಡುವುದರಿಂದ ನಿಮಗಾಗುವ ರಕ್ತದ ಒತ್ತಡ ಕಡಿಮೆ ಆಗುತ್ತದೆ ಮತ್ತು ಆತಂಕವನ್ನು ಹೋಗಲಾಡಿಸುತ್ತದೆ.ಯಾರು ಕ್ಷಮಿಸುವ ಗುಣವನ್ನು ಹೊಂದಿರುತ್ತಾರೋ ಅವರು ಹೆಚ್ಚು ಆತ್ಮ ಗೌರವ ಹೊಂದಿರುತ್ತಾರೆ.

ನಿಮ್ಮಲ್ಲಿ ತುಂತಟನವಿರಲಿ

ನಿಮ್ಮಲ್ಲಿ ತುಂತಟನವಿರಲಿ

ನಿಮ್ಮಲ್ಲಿ ಸ್ವಲ್ಪ ತುಂಟತನ ತುಂಬಿದ್ದರೆ ಅದು ನಿಮ್ಮ ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ.ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ನ ಹೃದಯ ತಜ್ಞರ ಪ್ರಕಾರ ಹಾಸ್ಯ ಪ್ರಜ್ಞೆ ಹೊಂದಿರುವ ಜನರ ಹೃದಯ ಹೆಚ್ಚು ಆರೋಗ್ಯಕರವಾಗಿರುತ್ತದೆ. ಹೃದಯವನ್ನು ಕಾಪಾಡಿಕೊಳ್ಳುವ ವಿಷಯ ಬಂದಾಗ 'ನಗು ಉತ್ತಮ ಮದ್ದು'ಎನ್ನಲಾಗುತ್ತದೆ.

English summary

Things We Can Learn From Our Pets

We can learn a lot from our pets. Here are 15 things we can learn from our pets.
X
Desktop Bottom Promotion