For Quick Alerts
ALLOW NOTIFICATIONS  
For Daily Alerts

ಹೆರಿಗೆ ಬೇನೆ ಪ್ರಾರಂಭದ ಲಕ್ಷಣಗಳು

By Super
|

ಹಗುರಾಗುವಿಕೆ ಎಂಬುದು ದೇಹವು ಹೆರಿಗೆ ಬೇನೆಗೆ ಸಿದ್ಧಗೊಳ್ಳುವ ಹಂತದ ಒಂದು ಭಾಗವಾಗಿದೆ. ಇದು ಭ್ರೂಣವು ಪೂರ್ತಿ ಬೆಳೆದು ಕಿರಿಹೊಟ್ಟೆಯಿಂದ ಕೆಳಗೆ ಬಂದಾಗ ಉಂಟಾಗುತ್ತದೆ. ಕೆಲವೊಮ್ಮೆ ಇದನ್ನು ಮಗು " ಜಾರುವಿಕೆ" ಅಥವಾ ಹೋರಾಟ ಎಂದು ಸಹ ಪರಿಗಣಿಸಲಾಗುತ್ತದೆ.

ಇದನ್ನು ಗರ್ಭಿಣಿ ಮಗುವಿಗೆ ಜನ್ಮ ನೀಡುವ ವಿಚಾರದಲ್ಲಿ ಭವಿಷ್ಯದ ನಿಶ್ಚಿತ ಸೂಚನೆಯನ್ನಾಗಿ ಪರಿಗಣಿಸಲಾಗುವುದಿಲ್ಲ. ಆದರು ಇದು ಹಲವಾರು ಮಹಿಳೆಯರಲ್ಲಿ ಹಲವು ಕಾಲ ಘಟ್ಟದಲ್ಲಿ ಕಾಣಿಸಿಕೊಳ್ಳುತ್ತದೆ. ಮತ್ತೊಂದು ಕುತೂಹಲಕಾರಿಯಾದ ವಿಚಾರವೇನೆಂದರೆ ಕೆಲವು ಮಹಿಳೆಯರಿಗೆ ಈ ಹಗುರಾಗುವಿಕೆ ಉಂಟಾಗಿರುವುದು ಸ್ವತಃ ಅವರಿಗೆ ತಿಳಿದಿರುವುದಿಲ್ಲ.

Signs of Pregnancy Lightening

ಕಾಲದ ಚೌಕಟ್ಟು
ಹಗುರಾಗುವಿಕೆಯು ಸಾಮಾನ್ಯವಾಗಿ ಹೆರಿಗೆ ಬೇನೆ ಶುರುವಾಗುವ ಮುಂದಿನ ನಾಲ್ಕು ವಾರಗಳ ಮೊದಲು ಪ್ರಾರಂಭವಾಗುತ್ತದೆ. ಈಗಾಗಲೆ ಗರ್ಭಿಣಿಯಾಗಿ ಮಗುವನ್ನು ಹೆತ್ತಿರುವ ಕೆಲವು ಮಹಿಳೆಯರಲ್ಲಿ ಹಗುರಾಗುವಿಕೆಯು ಹೆರಿಗೆ ಬೇನೆ ಶುರುವಾಗುವ ತನಕ ಪ್ರಾರಂಭವಾಗುವುದಿಲ್ಲ. ಒಂದೊಮ್ಮೆ ನೀವು ಹಗುರಾಗುವಿಕೆಯ ಅನುಭವವನ್ನು ಅನುಭವಿಸಿದಲ್ಲಿ, ಅಂದರೆ ಕಿರು ಹೊಟ್ಟೆಯಲ್ಲಿ ಒತ್ತಡವುಂಟಾದಲ್ಲಿ ನಿಮ್ಮ ವೈಧ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ. ಆದರೆ ಹೀಗೆ ಹೋಗಬೇಕಾದರೆ ನಿಮ್ಮ ಹೆರಿಗೆಗೆ ನೀಡಲಾಗಿರುವ ದಿನದಿಂದ ಸುಮಾರು ನಾಲ್ಕು ವಾರವಾದರು ಹಾಗಿರಬೇಕು. (ಉಲ್ಲೇಖ 1)

ಚಿಹ್ನೆಗಳು

ಹಗುರಾಗುವಿಕೆ ಎನ್ನುವ ಹೆಸರು ಬರಲು ಕಾರಣ ಇದು ಬಂದಾಗ ದೇಹವು ಹಗುರವಾದ ಅನುಭವ ನೀಡುತ್ತದೆ ಅಥವಾ ಇದು ಸಂಭವಿಸಿದ ನಂತರ ಆಕೆಗೆ ದೇಹವು ಹಗುರವಾದ ಅನುಭವ ನೀಡುತ್ತದೆ.( ಉಲ್ಲೇಖ 3). ಮಗುವು ಗರ್ಭಾಶಯದಿಂದ ಕೆಳಹೊಟ್ಟೆ ಕಡೆಗೆ ಚಲಿಸಲು ಪ್ರಾರಂಭಿಸಿದಾಗ ನೀವು ಆರಾಮವಾಗಿ ಉಸಿರಾಡಲು ಮತ್ತು ಧೀರ್ಘ ಉಸಿರನ್ನು ತೆಗೆದುಕೊಳ್ಲಲು ನೆರವಾಗುತ್ತದೆ. ಜೊತೆಗೆ ಒಂದೆ ಬಾರಿಗೆ ಯಾವುದೇ ಅಡೆ ತಡೆಯಿಲ್ಲದೆ ಗಡದ್ದಾಗಿ ಊಟ ಮಾಡಬಹುದು ಮತ್ತು ಎದೆ ಉರಿಯಿಂದ ಆರಾಮವನ್ನು ನೀಡುತ್ತದೆ ( ಉಲ್ಲೇಖ 1). ಅಲ್ಲದೆ ನಿಮ್ಮ ಎದೆ ಭಾಗ ಮತ್ತು ಗರ್ಭಾಶಯದ ನಡುವೆ ಹೆಚ್ಚಿನ ಅಂತರ ಖಾಲಿಯಿರುವುದನ್ನು ನೀವು ಗಮನಿಸಬಹುದು ( ಉಲ್ಲೇಖ 2) ಅಥವಾ ಆಕಾರದಲ್ಲಿ ಬದಲಾವಣೆಗಳಾಗಬಹುದು ಅಥವಾ ನಿಮ್ಮ ಗರ್ಭದ ಆಕಾರದಲ್ಲಿ ಬದಲಾವಣೆ ಕಾಣಬಹುದು.

ಅಸ್ವಸ್ಥತೆ
ಹಗುರಗುವಿಕೆ ಉಂಟಾದ ನಂತರ ನಿಮ್ಮ ಕಿರು ಹೊಟ್ಟೆಯಲ್ಲಿ ಒತ್ತಡ ಹೆಚ್ಚಾಗುವ ಅನುಭವವನ್ನು ನೀವು ಅನುಭಿಸಬಹುದು, ನಡೆದಾಡಿದಾಗ ಆಯಾಸವಾಗಬಹುದು, ಅಲ್ಲದೆ ಮಗು ನಿಮ್ಮ ಮೂತ್ರಾಶಯವನ್ನು ಒತ್ತುವುದರಿಂದ ನೀವು ಹೆಚ್ಚಾನುಹೆಚ್ಚಾಗಿ ಮೂತ್ರ ವಿಸರ್ಜನೆಗೆ ಹೋಗುತ್ತಿರುತ್ತೀರ ( ಉಲ್ಲೇಖ 2). ಬಹುತೇಕ ಹೆಂಗಸರು ತಾವು ನಡೆಯುವಾಗ ಬಗ್ಗಿ ನಡೆಯುವಂತಾಗುತ್ತದೆ ಎಂದು ಸಹ ತಿಳಿಸಿದ್ದಾರೆ ( ಉಲ್ಲೇಖ 1). ಅಥವಾ ಮಗು ಇನ್ನೇನು ನಿಮಿಷದಲ್ಲಿಯೆ ಹೊರಗೆ ಬಂದಂತೆ ಭಾಸವಾಗಲಾರಂಭಿಸುತ್ತದೆ. ಅದಕ್ಕಾಗಿ ನೀವು ಗುದನಾಳದ ಮೇಲೆ ಬೀಳುವ ಹೆಚ್ಚಿನ ಒತ್ತಡಕ್ಕೆ ಧನ್ಯವಾದಗಳನ್ನು ಸಲ್ಲಿಸಬೇಕು. ಆದಗಿಯು ಹಗುರಾಗುವಿಕೆಯು ಯಾವುದೇ ಲಕ್ಷಣಗಳಿಲ್ಲದೆ ಅಥವಾ ಬದಲಾವಣೆಗಳಿಲ್ಲದೆ ಸಹ ಸಂಭವಿಸಬಹುದು.

ಪರಿಹಾರ
ನಿಮಗೆ ಉಂಟಾಗುವ ಹಗುರಾಗುವಿಕೆಯು ಬಹುತೇಕ ನೀವು ಕಡಿಮೆ ಇಷ್ಟ ಪಡುವ ಗರ್ಭಧಾರಣೆಯ ಲಕ್ಷಣಗಳನ್ನು ಕಡಿಮೆಗೊಳಿಸುತ್ತದೆ ಹಾಗು ಹೊಸ ಲಕ್ಷಣಗಳನ್ನು ಉಂಟು ಮಾಡುತ್ತದೆ. ಹಗುರಾಗುವಿಕೆಯಿಂದ ನಿಮಗೇನಾದರು ಕಿರುಹೊಟ್ಟೆಯಲ್ಲಿ ಸಹಿಸಲಾಗದಂತಹ ನೋವೇನಾದರು ಉಂಟಾದರೆ, ಒಂದು ತಲೆದಿಂಬನ್ನು ತೆಗೆದು ಕೊಂಡು ನಿಮ್ಮ ಸೊಂಟದ ಕೆಳಗೆ ಹಿಟ್ಟುಕೊಂಡು ಆರಾಮವಾಗಿ ಮಲಗಿ. ಹಾಗೆಯೇ ಸೊಂಟವನ್ನು ಸ್ವಲ್ಪ ಮಟ್ಟಿಗೆ ಬಾಗಿಸಿ ಮತ್ತು ಬಳಕುವಂತೆ ಮಾಡಿ. ನಡೆದಾಡಿ ನಿಮ್ಮ ಕಿರು ಹೊಟ್ಟೆಯ ಮೇಲೆ ಒತ್ತಡ ಹಾಕುವ ಬದಲು ಈಜುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.

ಪರಿಶೀಲನೆ

ನಿಮ್ಮ ಹೆರಿಗೆಯ ದಿನವು ಸಮೀಪದಲ್ಲಿದ್ದರೆ ಹಗುರಾಗುವಿಕೆಯನ್ನು ಪರಿಗಣಿಸಬೇಡಿ ಮತ್ತು ನಿಮ್ಮ ಮಗುವು ನಿಮ್ಮ ಗರ್ಭಾಶಯದಿಂದ ಜಾರಿ ಕೆಳಗೆ ಬೀಳುತ್ತದೆ ಎಂದು ಯೋಚಿಸಬೇಡಿ. ಅದು ಹೆರಿಗೆಯ ಬೇನೆಯಾಗಿರುವುದಿಲ್ಲ. ಏಕೆಂದರೆ ಅದು ಗರ್ಭಧಾರಣೆಯಲ್ಲಿ ಪ್ರತಿ ಬಾರಿಯು ಮತ್ತು ಪ್ರತಿಯೊಬ್ಬರಲ್ಲಿಯು ಬೇರೆ ಬೇರೆ ಅವಧಿಗೆ ಉಂಟಾಗುತ್ತದೆ. ಅದು ಇನ್ನು ಕೆಲವು ವಾರಗಳ ನಂತರ ಬರುತ್ತದೆ. ಅದನ್ನು ಮೊದಲೆ ನಿಶ್ಚಯಿಸುವ ಯಾವುದೇ ಮಾರ್ಗವಿಲ್ಲ. ಹಗುರಾಗುವಿಕೆಯು ನಿಮಗೆ ಯಾವುದೇ ಸೂಚನೆ ಕೊಡದೆ ಇದ್ದಕಿದ್ದಂತೆ ಕಾಣಿಸಿಕೊಳ್ಳಬಹುದು. ಹೆರಿಗೆ ನೋವಿನ ಸೂಚನೆ ಸಿಕ್ಕಿದ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

English summary

Signs of Pregnancy Lightening | Tips For Pregnancy Lady | ಹೆರಿಗೆ ಬೇನೆ ಪ್ರಾಂಭವಾಗುವ ಹಂತದ ಲಕ್ಷಣಗಳು | ಗರ್ಭಿಣಿ ಮಹಿಳೆಯರಿಗೆ ಕೆಲ ಸಲಹೆಗಳು

Lightening, part of the body's preparation for labor, occurs when the fetus descends into the pelvis late in pregnancy and is sometimes referred to as engagement or as the baby "dropping".
X
Desktop Bottom Promotion