For Quick Alerts
ALLOW NOTIFICATIONS  
For Daily Alerts

ಗಿಡ ಮೂಲಿಕೆಗಳನ್ನು ಒಣಗಿಸುವುದು ಹೇಗೆ?

By Super
|

ದಿನ ನಿತ್ಯದ ಆಹಾರ ಕ್ರಮದಲ್ಲಿ ಎಷ್ಟೇ ಪೋಷಕಾಂಶಗಳು ದೊರೆತರೂ ಕೂಡಾ ಆರೋಗ್ಯವಾಗಿರುವುದಕ್ಕೆ ಒಂದಿಷ್ಟು ಬೇರೆ ಇನ್ನೇನೂ ವಸ್ತುಗಳು ಬೇಕೆ ಬೇಕು. ಅದು ನೈಸರ್ಗಿಕವಾಗಿ ಇದ್ದರೆ ಇನ್ನು ಒಳ್ಳೆಯದು. ಅದೇ ಗಿಡ ಮೂಲಿಕೆಗಳು. ತಲೆತಲಾಂತರದಿಂದ ಆರೋಗ್ಯ ವೃದ್ಧಿಗೆ ಗಿಡ ಮೂಲಿಕೆಗಳೇ ರಾಮಬಾಣ. ಆದರೆ ಈಗ ಗಿಡ ಮೂಲಿಕೆಗಳು ಹೆಚ್ಚು ಕೆಡದಂತೆ ಬಹಳಷ್ಟು ಕಾಲ ಹಸಿಯಾಗಿಯೇ ಉಳಿಯುವಂತೆ ಮಾಡುವುದು ಕಷ್ಟ. ಅದಕ್ಕಾಗಿಯೇ ಅವುಗಳನ್ನು ಒಣಗಿಸಿ ಸಂಗ್ರಹಿಸಿಡುವುದು ಉತ್ತಮವಾದ ವಿಧಾನ. ಅದಕ್ಕೆ ಕೆಲವು ಟಿಪ್ಪಣಿಗಳು ಇಲ್ಲಿವೆ.

ಗಿಡಮೂಲಿಕೆಗಳನ್ನು ಮನೆಯ ಮುಂದೆ ತೋಟದಲ್ಲಿ ಒಣಗಿಸುವುದು ಪ್ರಯೋಜನಕ್ಕೆ ಬರುತ್ತದೆ. ನಿಮ್ಮ ಮೂಲಿಕೆಗಳನ್ನು ಒಣಗಿಸುವುದರಿಂದ ಮೂಲಿಕೆಗಳ ಮೂಲ ಹಾಗೂ ಪ್ರಮಾಣದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ. ಆದರೆ ತಾಜಾ ಗಿಡ ಮೂಲಿಕೆಗಳು ಉತ್ತಮವಾದದ್ದು, ಗಿಡ ಮೂಲಿಕೆಗಳು ಚಳಿಗಾಲದಲ್ಲಿ ಒಣಗಿದ ಹೊರತು ಬಳಸಲು ಯೋಗ್ಯವಾದುದಲ್ಲ. ಒಣ ಗಿಡ ಮೂಲಿಗೆಗಳಲ್ಲು ಮೂರು ಮುಖ್ಯ ವಿಧಗಳು :

How to Preserve Herbs

ತೂಗುಹಾಕುವುದು
ಘನೀಕರಣ
ಎಣ್ಣೆಯಲ್ಲಿ ನೆನೆಸುವುದು.

ಈ ಎಲ್ಲವೂ ಬೇರೆ ಬೇರೆಯಾದ ತನ್ನದೇ ಆದ ಉಪಯೋಗಗಳನ್ನು ಹೊಂದಿವೆ. ನಿಮ್ಮ ಸ್ವಂತ ಆಯ್ಕೆಯ ಮೇರೆಗೆ ಕಳಗಿನ ಯಾವುದೇ ವಿಧಾನದ ಮೂಲಕ ಮೂಲಿಕೆಗಳನ್ನು ಒಣಗಿಸಬಹುದು.

ಹಂತಗಳು :

ಮನೆಯ ಮುಂದಿನ ತೋಟಗಳಲ್ಲಿ ಗಿಡ ಮೂಲಿಕೆಗಳನ್ನು ಬೆಳೆಯಿರಿ. ಗಿಡಗಳನ್ನು ಕತ್ತರಿಸುವ ಕತ್ತರಿ ಅಥವಾ ಅಡುಗೆ ಮನೆಯಲ್ಲಿ ಬಳಸುವ ಕತ್ತರಿಯನ್ನು ಬಳಸಿ ಮೂಲಿಕೆಗಳನ್ನು ಕತ್ತರಿಸಿ. ನೀವು ಬೆಳೆಸಿರುವ ಮೂಲಿಕೆಯು ಚಳಿಗಾಲದಲ್ಲಿ ಬದುಕುವ ಸಾಮರ್ಥ್ಯವನ್ನು ಹೊಂದಿದ್ದರೆ ಅದರ ತಳದಲ್ಲಿ ಕಾಂಡವನ್ನು ಕತ್ತರಿಸಿ. ಉಳಿದ ಮೂಲಿಕೆಗಳ ಬೇರುಗಳನ್ನು ಕತ್ತರಿಸಿ ನಂತರ ಕಾಂಪೋಸ್ಟ್ ಮಾಡಬಹುದು. ಒಣಗಿಸಲು ಬೇಕಾದ ಮೂಲಿಕೆಗಳನ್ನು ಕತ್ತರಿಸಿ ಅವುಗಳ ದೀರ್ಘ ಕಾಂಡಗಳೊಂದಿಗೆ ಹಾಗೆಯೇ ಬಿಡಿ. ಗಿಡ ಮೂಲಿಕೆಗಳನ್ನು ಮತ್ತೆ ಬೆಳೆಸಲು ಸಲಹೆಗಳನ್ನು ಪಡೆಯಿರಿ.

ಕೊಳೆಯಾದ ಗಿಡ ಮೂಲಿಕೆಗಳನ್ನು ಸ್ವಚ್ಚವಾಗಿ ತೊಳೆಯಿರಿ. ಇದಕ್ಕಿಂತ ಉತ್ತಮವಾದ ಮಾರ್ಗವೆಂದರೆ ಸ್ಪೇ / ಸೇಚನಿಯನ್ನು ಬಳಸಿ ಗಿಡಮೂಲಿಕೆಗಳ ಮೇಲೆ ಮಂಜಿನ ಹನಿಗಳಂತೆ ನೀರನ್ನು ಸಿಂಡಡಿಸಿ. ನಂತರ ಅದನ್ನು ಸ್ವಚ್ಚವಾದ ಬಟ್ಟೆಯಿಂದ ಒರೆಸಿರಿ. (ಇಲ್ಲವಾದರೆ ಶಿಲೀಧ್ರಗಳು ಗಿಡ ಮೂಲಿಗೆಯನ್ನು ಕೊಳೆಯುವಂತೆ ಮಾಡಬಹುದು)
ಬೇರೆ ಬೇರೆ ವಿಧಾನಗಳು :

1. ತೂಗು ಹಾಕುವುದು :
ಕಾಂಡದಲ್ಲಿನ್ ಅಕೆಳಗಿನ ಎಲೆಗಳನ್ನು ತೆಗೆದುಹಾಕಿ. ಉಳಿದ ಎಲೆಗಳ ಒಂದು ಗುಂಪನ್ನು ಮಾಡಿ ಕಾಂಡವನ್ನು ಮುಚ್ಚಿ (ಕವರ್ ನಿಂದ) ವೆಂಟಿಲೇಶನ್ / ಗಾಳಿಯಾಡುವುದಕ್ಕೆ 5 - 10 ಗುಂಪುಗಳನ್ನು ಮಾಡಬೇಕಾಗುತ್ತದೆ. ಪಾದಾಚಾರಿಗಳು ಹಾಗೂ ವಾಹನ ಇನ್ನಿತರ ಜನರು ತಿರುಗಾಡದ, ಶುಷ್ಕ, ಬೆಚ್ಚನೆಯ (ಆರ್ದ್ರ ವಲ್ಲದ) ಉತ್ತಮ ಗಾಳಿಯಿರುವ, ಕತ್ತಲಿನ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಿ. ಮೂಲಿಕೆಗಳು ಒಣಗಲು ಸಾಮಾನ್ಯವಾಗಿ ಬೇಕಾಗಿರುವ ಉಷ್ಣಾಂಶ 20 ಡಿ.ಸೆ. ನಿಮ್ಮ ಮನೆಯಲ್ಲಿ ಕತ್ತಲಿನ ಸ್ಥಳವಿಲ್ಲದಿದ್ದರೆ ಊಟದ ಚೀಲ ಅಥವಾ ಕಾಗದದ ಚೀಲದಲಿ ಕಾಂಡವನ್ನು ಹಾಕಿ ಮುಚ್ಚಿ ಚಿಕ್ಕದಾದ ಕಿಂಡಿಯನ್ನು ಮಾಡಿಯೂ ಇಡಬಹುದು. ಈ ವಿಧಾನವು ಧೂಳು ಮೂಲಿಕೆ ಗಿಡದ ಮೇಲೆ ಕೂರದಂತೆಯೂ ಕಾಪಾಡುತ್ತದೆ.

ಮೂಲಿಕೆಗಳು ಒಣಗುವುದಕ್ಕೆ 1 - 3 ವಾರಗಳ ಕಾಲ ಹಾಗೆಯೇ ಬಿಡಿ. ಆಗಾಗ ಪರೀಕ್ಷಿಸಿ ಹಾಗೂ ನಂತರ ಎಷ್ಟು ಒಣಗಿದೆ ಎಂಬುದನ್ನು ಪರಿಶೀಲಿಸಿ. ದಪ್ಪವಾಗಿರುವ ಕಾಂಡಗಳ ಮೂಲಿಕೆಗಳು ಹೆಚ್ಚು ದಿನ ಬಾಳಿಕೆ ಬರುತ್ತವೆ. ಮೂಲಿಕೆಗಳ ಎಲೆಗಳು ಎರಡು ಬೆರಳುಗಳ ನಡುವೆ ಉಜ್ಜಿದಾಗ ಅವು ಗರಿ ಗರಿಯಾಗಿದ್ದರೆ ಹಾಗೆಯೇ ಪುಡಿಯಾಗುತ್ತವೆ. ಇದರಿಂದ ಒಣಗಿರುವುದು ಖಚಿತವಾಗುತ್ತದೆ. ನಂತರ ಕಾಂಡಗಳಿಂದ ಎಲೆಗಳನ್ನು ಬೇರ್ಪಡಿಸಿ ಅವುಗಳನ್ನು ಗಾಳಿ ಹೋಗದ ಹರ್ಬ್ಸ್ ಜಾರ್ ಅಥವಾ ಯಾವುದೇ ಜಾರ್ ಒಳಗೆ ತುಂಬಿಸಿಡಿ. ಅದರಲ್ಲಿ ಯಾವುದೇ ಕಸ ಕಡ್ದಿಗಳು ಮರದ ತುಂಡುಗಳು ಇದ್ದರೆ ಅದನ್ನು ತೆಗೆಯಿರಿ. ಎಲೆಯನ್ನು ಪುಡಿ ಮಾದದೇ ಹಾಗೆಯೇ ಇಟ್ಟಿಕೊಳ್ಳಬಹುದು ಅಥವಾ ಅವುಗಳನ್ನು ಕೈಯಲ್ಲೇ ಪುಡಿ ಮಾಡಿ ಇಟ್ಟಿಕೊಳ್ಳಬಹುದು. (ತ್ವರಿತವಾಗಿ ಬಳಸಲು ಹಾಗೂ ಪರಿಮಳವನ್ನು ಹಾಗೆಯೇ ಉಳಿಸಿಕೊಳ್ಳಲು ಈ ವಿಧಾನ ಉತ್ತಮವಾದುದು.) ಅಥವಾ ಚಹಾ ಪುಡಿ ಯ ರೂಪದಲ್ಲಿ ಸೂಪ್ ಅಲಂಕಾರಿಹ ವಸ್ತುವಾಗಿಯೂ ಬಳಸಬಹುದು. ಆದರೆ ಇದು ತುಂಬಾ ಗರಿ ಗರಿಯಾಗಿದ್ದರೆ ಪುಡಿಯಾಗಿ ಬಿಡುತ್ತದೆ. ಆದರೆ ಬೀಜಗಳು ಈಡಿಯಾಗಿಯೇ ಇರಲಿ. ಅದನ್ನು ಅಡುಗೆಗೆ ಬಳಸುವಾಗ ಮಾತ್ರ ಪುಡಿ ಮಾಡಿಕೊಳ್ಳಬಹುದು.

ಈ ಗಿಡ ಮೂಲಿಕೆಗಳನ್ನು ಸಂಗ್ರಹಿಸಿಟ್ಟ ಬಾಟಲಿಗಳಿಗೆ ದಿನಾಂಕಗಳನ್ನು ಬರೆದಿಡಿ. ಒಂದು ವರ್ಷಕ್ಕೆ ಸಾಕಾಗುವಷ್ಟು ಗಿಡ ಮೂಲಿಕೆಗಳನ್ನು ಮಾತ್ರ ಸಂಗ್ರಹಿಸಿ.

2. ಘನೀಕರಿಸುವ ವಿಧಾನ :

ಘನೀಕರಿಸುವುದಕ್ಕೆ ಯೋಗ್ಯವಾದ ಗಿಡ ಮೂಲಿಕೆಗಳನ್ನೇ ಆಯ್ದುಕೊಳ್ಳಿ. ಸಾಮಾನ್ಯವಾಗಿ ಈ ವಿಧಾನವು ಮೃದು ಎಲೆಗಳಾದ ತುಳಸಿ, ಟರ್ಗೋನ್, ರುಚಿಕಟ್ಟು, ಪಾರ್ಸ್ಲಿ ಮೊದಲಾದ ಎಲೆಗಳ ಸಂಗ್ರಹಣೆಗೆ ಬಳಸುವುದು ಉತ್ತಮ. ಕೆಲವು ಗಿಡ ಮೂಲಿಕೆಗಳು ಒಣಗುವ ಗುಣವನ್ನು ಹೊಂದಿಲ್ಲವಾದ್ದರಿಂದ ಅವುಗಳನ್ನು ಹೆಪ್ಪುಗಟ್ಟಿಸಬಹುದಷ್ಟೇ.

ಆಗ ತಾನೇ ಕೊಯ್ದ ತಾಜಾ ಗಿಡ ಮೂಲಿಕೆಗಳ ಎಲೆಗಳನ್ನು ಈ ಮೊದಲೇ ತಿಳಿಸಿದ ವಿಧಾನದಂತೆ ತೊಳೆಯಿರಿ ನಂತರ ಒಣಗಿಸಿ. ಈ ಎಲೆಗಳನ್ನು ಒಟ್ಟಾಗಿ ಸೇರಿಸಿ ಫ್ರೀಜರ್ ಚೀಲಗಳು ಅಥವಾ ಪಾತ್ರೆಗಳಲ್ಲಿ ಹಾಕಿಡಿ. ಅವುಗಳನ್ನು ಕೇವಲ ಮೂರು ತಿಂಗಳುಗಳ ಕಾಲ ಬಳಸಬಹುದಾಗಿದ್ದು ದಿನಾಂಕವನ್ನು ಬರೆದಿಡಿ. ನಿಮಗೆ ಈ ಮೂಲಿಗೆಗಳು ಇನ್ನೂ ಹೆಚ್ಚು ದಿನ ಬಾಳಿಕೆ ಬರಬೇಕು ಎನ್ನುವ ಹಾಗಿದ್ದರೆ ಎಲೆಗಳನ್ನು ಅವು ಬಿಳಿಚಿಕೊಳ್ಳುವವ್ವರೆಗೆ ಕೆಲವು ಸೆಂಕೆಂಡುಗಳ ಹಾಲ ನೀರಿನಲ್ಲಿ ಕುದಿಸಿ. ನಂತರ ಅದನ್ನು ನೆರವಾಗಿ ಐಸ್ ಕೋಲ್ಡ್ ನೀರಿನಲ್ಲಿ ಹಾಕಿ ತೆಗೆದು ಫ್ರೀಜರ್ ನಲ್ಲಿ ಹಾಕಿರಿ. ಹೀಗೆ ಬಿಳಿಚಿಕೊಂಡ ಎಲೆಗಳು ಆರು ತಿಂಗಳುಗಳ ಕಾಲ ಬಳಸಬಹುದಾಗಿದೆ.

ಕೆಲವು ಅಡುಗೆಯವರು ಈ ಮೂಲಿಕಾ ಎಲೆಗಳನ್ನು ಐಸ್ ಕ್ಯೂಬ್ ಟ್ರೇ ಗಳಲ್ಲಿ ಫ್ರೀಜರ್ ಮಾಡಿರುತ್ತಾರೆ. ಇದರಿಂದ ಅವರ ಅಡುಗೆಗೆ ಬೇಕಾದ ಸರಿಯಾದ ಗಾತ್ರದ ಎಲೆಗಳನ್ನು ಅವರು ಬಳಸಬಹುದು. ನೀವು ಈ ರೀತಿಯಲ್ಲಿ ಮೂಲಿಕೆಗಳನ್ನು ಸಂರಕ್ಷಿಸಲು ಬಯಸಿದರೆ, ಮೂರನೇ ಒಂದು ಭಾಗದಷ್ಟು ಕತ್ತರಿಸಿದ ಎಲೆಗಳನ್ನು ಮೂರನೇಯ ಎರಡು ಭಾಗದಷ್ಟು ನೀರನ್ನು ಹಾಕಿ ಫ್ರೀಜ್ ಮಾಡಿ. ತುಳುಸಿ ಎಲೆಗಳನ್ನು ಆಲೀವ್ ಎಣ್ಣೆ ಬಳಸಿ ಫ್ರೀಜ್ ಮಾಡಬಹುದು ಆದರೆ ಇದಕ್ಕೇ ನೀರು ಹಾಕುವಂತಿಲ್ಲ. ನಂತರ ಪ್ರೀಜ್ ನಿಂದ ಐಸ್ ಕ್ಯೂಬ್ ಗಳನ್ನು ತೆಗೆದು ನಂತರ ಅವುಗಳನ್ನು ಪ್ಲಾಸ್ಟಿಕ್ ಫ್ರೀಜರ್ ಚೀಲಗಳಲ್ಲಿ ಸಂಗ್ರಹಿಸಿಡಿ. ಅಗತ್ಯವಿದ್ದರೆ ಸಣ್ಣ ಸಣ್ಣ ತುಂಡುಗಳನ್ನು ತೆಗೆದು ಹಾಕಬಹುದು.

3. ಎಣ್ಣೆಯಲ್ಲಿ ನೆನೆಸುವ ವಿಧಾನ :

ಮೆಲೆ ತಿಳಿಸಿದ ವಿಧಾನಗಳಂತೆ ಗಿಡ ಮೂಲಿಕೆಗಳನ್ನು ಕತ್ತರಿಸಿ ಸ್ವಚ್ಚಗೊಳಿಸಿ. ಈ ವಿಧಾನಕ್ಕೆ ಬೇಕಾದ ಎಣ್ಣೆಯನ್ನು ಆಯ್ದುಕೊಳ್ಳಿ. ಆಲೀವ್ ಎಣ್ಣೆಯು ಅತ್ಯಂತ ಒಳ್ಳೆಯದಾದಿದ್ದು, ನಿಮಗೆ ಬೇಕಾದ ಎಣ್ಣೆಯನ್ನು ಆಯ್ದುಕೊಳ್ಳಿ. ಕಾಂಡಗಳಿಂದ ಎಲೆಗಳನ್ನು ಬೇರ್ಪಡಿಸಬಹುದು. ಅಥವಾ ಕಾಂಡಗಳನ್ನು ಜೊತೆಯಲ್ಲಿಯೇ ಹಾಕಬಹುದು. ನೀವು ಸುವಾಸನೆಯಿರುವ ಗಿಡ ಮೂಲಿಕಾ ಎಣ್ಣೆಯನ್ನು ಬಳಸುತ್ತಿದ್ದರೆ ಕಾಂಡವನ್ನೂ ಬಳಸುವುದು ಒಳ್ಳೆಯದು. ಇದನ್ನು ಒಂದು ಪಾತ್ರೆಯಲ್ಲಿ ಹಾಕಿ. ಎಣ್ಣೆ ಬಾಟಲಿಯಲ್ಲಿ ಗಿಡ ಮೂಲಿಕಾ ಎಲೆಗಳ ಬೊತೆಗೆ ಕಾಂಡವನ್ನೂ ಸಂಗ್ರಹಿಸಿಟ್ಟರೆ ಅದು ಅಲಂಕಾರಿಕ ವಸ್ತುವಿನಂತೆ ನಿಮ್ಮ ಅಡುಗೆಮನೆಯನ್ನು ಸುಂದರವಾಗಿಸುವುದು. ಜೊತೆಗೆ ಅಡುಗೆಗೂ ಇದನ್ನು ಬಳಸಬಹುದು. ನೀವು ಅಡುಗೆಗೆ ಗಿಡ ಮೂಲಿಕೆಯ ಎಲೆಗಳನ್ನು ಬಳಸಲು ಬಯಸಿದರೆ ಅಗಲವಾದ ಪಾತ್ರೆಯಲ್ಲಿ ಸಂಗ್ರಹಿಸಿಡುವುದು ಉತ್ತಮ. ಇದರಿಂದ ಎಣ್ಣೆ ತುಂಬಿದ ಗಿಡ ಮೂಲಿಕೆಗಳನ್ನು ಸೌಟ್ ಗಳನ್ನು ಬಳಸಿ ತೆಗೆಯಬಹುದು.

ವಿಶೇಷವಾಗಿ ಬೆಚ್ಚಗಿನ ವಾತಾವರಣವಿರುವ ಸಮಯದಲ್ಲಿ ತಂಪಾದ ಅಥವಾ ಶೈತ್ಯೀಕರಣ ಹೊಂದಿರುವ ಸ್ಥಳಗಳಲ್ಲಿ ಪಾತ್ರೆಯನ್ನು ಇಡಿ. ಇದನ್ನು ತಯಾರು ಮಾದಿದ ಆರು ತಿಂಗಳುಗಳ ಒಳಗೆ ಬಳಸುವುದು ಒಳ್ಳೆಯದು.

ಸೂಚನೆಗಳು:

ನೀವು ನಿಮ್ಮ ತೋಟಗಳಲ್ಲಿ ರಾಸಾಯನಿಕಗಳನ್ನು ಬಳಸಿದ್ದರೆ, ಅದು ನೇರವಾಗಿ ಗಿಡ ಮೂಲಿಕೆಗಳ ಮೇಲೆ ಬೀಳದೆ ಇದ್ದರೂ ಕೂಡಾ ಅದನ್ನು ಒಣಗಿಸುವುದಕ್ಕೆ ಮೊದಲು ಮುಂಜಾಗ್ರತೆಯನ್ನು ತೆಗೆದುಕೊಂಡು ಸ್ವಚ್ಚಗೊಳಿಸಬೇಕು. ಮೆಲೆ ವಿವರಿಸಿದಂತೆ ಸ್ಚಚ್ಚಗೊಳಿಸಿದ್ದರೂ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು. ಈಕೆಂದರೆ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯ ಅಮೂಲ್ಯವಾದ್ದರಿಂದ ಹೆಚ್ಚಿನ ತೊಂದರೆಯನ್ನು ತೆಗೆದುಕೊಳ್ಳದಿರುವುದೇ ಉತ್ತಮ.

ತೇವ ಇರುವ ಸಂದರ್ಭದಲ್ಲಿ ಅಥವಾ ಇಬ್ಬನಿ ಬೀಳುವ ಸಂದರ್ಭದಲ್ಲಿ ಗಿಡ ಮೂಲಿಕೆಗಳನ್ನು ಕಟಾವು ಮಾಡಬೇಡಿ. ಅವುಗಳನ್ನು ಕೈಯಿಂದ ಒಣಗಿಸಲು ಸಾಧ್ಯವಿಲ್ಲ. ಮೂಲಿಕೆಗಳು ಸರಿಯಾಗಿ ಒಣಗದಿದ್ದರೆ ಶಿಲೀಂಧ್ರಗಳು ಬಂದು ಗಿಡವು ಕೊಳೆತು ಹೋಗುತ್ತದೆ.

ಗಿಡ ಮೂಲಿಕೆಗಳನ್ನು ಬಹಳಷ್ಟು ಸಮಯ ತೂಗುಹಾಕಬೇಡಿ. ಏಕೆಂದರೆ ಹೀಗೆ ಮಾಡುವುದರಿಂದ ಗಿದ ಮೂಲಿಕೆಗಳು ಅವುಗಳ ಸುವಾಸನೆಯನ್ನು ಕಳೆದುಕೊಳ್ಳುತ್ತವೆ.

ಒಟ್ಟಿನಲ್ಲಿ ನಮ್ಮ ಆರೋಗ್ಯಕ್ಕಾಗಿ ನಮ್ಮ ಮನೆಗಳಲ್ಲಿಯೇ ಬೇಕಾದ ಮೂಲಿಕೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.

English summary

How to Preserve Herbs | Tips For Home Improvements | ಗಿಡ ಮೂಲಿಕೆಗಳನ್ನು ಒಣಗಿಸುವುದು ಹೇಗೆ? | ಮನೆ ನಿರ್ವಹಣೆಗೆ ಕೆಲ ಸಲಹೆಗಳು

There are three principal ways to dry herbs: hanging, freezing or steeping in oil. Each has its benefits. Here's how to dry your own herbs in any way you choose.
X
Desktop Bottom Promotion