For Quick Alerts
ALLOW NOTIFICATIONS  
For Daily Alerts

ಹೆಚ್ಚು ಪರಿಣಾಮಕಾರಿಯಾಗಿ ಪಥ್ಯ ಮಾಡುವುದು ಹೇಗೆ?

By Super
|

ಹಳೆಯ ಪದ್ದತಿಯ ಪಥ್ಯ ಮರಿಣಾಮ ಬೀರುತ್ತಿಲ್ಲವಾ? ಹೊಸ ಪಥ್ಯ(ಡಯಟ್) ಪ್ರಯತ್ನಿಸಿ: ಇದು ತತ್ ಕ್ಷಣಕ್ಕೆ ಪರಿಣಾಮ ಬೀರುವಿದಿಲ್ಲ. ಆದರೆ ಹೆಚ್ಚು ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ.

1. ನೀವು ಸರಾಸರಿ ದಿನದಲ್ಲಿ ತಿನ್ನುವ ಆಹಾರಗಳ ಪಟ್ಟಿ ಮಾಡಿ.

2. ಪ್ರತಿದಿನ ನೀವು ಸೇವಿಸುವ ಆಹಾರದಲ್ಲಿನ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ ಗಳು, ಹಣ್ಣು ಮತ್ತು ತರಕಾರಿಗಳು, ಹಾಲಿನ ಉತ್ಪನ್ನಗಳು, ಕೊಬ್ಬು ಹಾಗೂ ಸಿಹಿ ಪದಾರ್ಥಗಳ ಪ್ರಮಾಣವೆಷ್ಟು ಎಂಬುದನ್ನು ಲೆಕ್ಕ ಹಾಕಿ.

How To Get The Most Effective Die

3. ಮೊದಲ ಎರಡು ವಾರ ಪಾಯಸದಂಥ ಸಿಹಿ ಪದಾರ್ಥ ತಿನ್ನುವುದನ್ನು ನಿಲ್ಲಿಸಿ.

4. ನೀವು ತಿನ್ನುವ ಕಾರ್ಬೋಹೈಡ್ರೇಟ್ ಗಳ ಪ್ರಮಾಣ ಕಡಿಮೆಗೊಳಿಸಿ. ಅವು ದೇಹಕ್ಕೆ ಮುಖ್ಯವಾದ ಕಾರಣ, ಸಂಪೂರ್ಣ ತಿನ್ನುವುದನ್ನು ನಿಲ್ಲಿಸಬೇಡಿ.

5. ಹಣ್ಣು, ತರಕಾರಿ ಮತ್ತು ಮಾಂಸ ಪದಾರ್ಥ ತಿನ್ನುವುದನ್ನು ಹೆಚ್ಚಿಸಿ. ಈ ಆಹಾರಗಳು ಹೆಚ್ಚೆಚ್ಚು ವಿಟಾಮಿನ್ಸ್ ಮತ್ತು ಪೋಷಕಾಂಶಗಳನ್ನು ನೀಡುತ್ತವೆ.

6. ನಿಮ್ಮ ವೈದ್ಯರ ಮಾರ್ಗದರ್ಶನದ ಮೇರೆಗೆ ನೀವು ಸ್ವೀಕರಿಸುವ ಕ್ಯಾಲೋರಿ ಪ್ರಮಾಣವನ್ನು ಕಡಿಮೆಗೊಳಿಸಿ.

7. ಕನಿಷ್ಟ 3 ಹೊತ್ತಿನ ಊಟ ಹಾಗೂ 2 ಸಲ ಸ್ನ್ಯಾಕ್ಸ್ ತಿನ್ನುತ್ತಿದ್ದೀರಿ ಎಂಬುದನ್ನು ಖಾತರಿಪಡಿಸಿಕೊಳ್ಳಿ.

8. ಹೃದಯ ಸಂಬಂಧಿ ಪರೀಕ್ಷೆಗಳಾದ ಕಾರ್ಡಿಯಾಲಜಿ ಮುಂತಾದವುಗಳನ್ನು ಕನಿಷ್ಟ ವಾರಕ್ಕೆ 3 ಬಾರಿಯಾದರೂ ಮಾಡಿಸಿಕೊಳ್ಳಿ. ನಿಮ್ಮ ಹ್ರದಯದ ಬಡಿತ ನಿಗಿದಿತ ಸಮಯಕ್ಕೆ 120 ಕ್ಕಿಂತ ಹೆಚ್ಚಿರುವುದನ್ನು ಖಾತರಿಪಡಿಸಿಕೊಳ್ಳಿ.

9. ಸಿಹಿಯ ಅಂಶ ಕಡಿಮೆಯಿರುವ ಧಾನ್ಯಗಳ ಪಟ್ಟಿ ಮಾಡಿ. ಅಂತಹ ಧವಸ ಧಾನ್ಯಗಳನ್ನೇ ಸುಪರ್ ಮಾರ್ಕೇಟ್ ನಿಂದ ತನ್ನಿ.

ಸಲಹೆಗಳು:

ಎಷ್ಟು ಸಾಧ್ಯವೋ ಅಷ್ಟು ಮೆಟ್ಟಿಲುಗಳನ್ನು ಹತ್ತಿ. ಮೆಟ್ಟಿಲು ಹತ್ತುವುದು ಅಂಥ ದೊಡ್ಡ ವ್ಯಾಯಾಮವಲ್ಲದಿದ್ದದರೂ, ಇದರಿಂದ ಸಪೂರವಾದ ಕಾಲುಗಳನ್ನು ಹೊಂದುವಿರಿ.

ಮುಂಜಾನೆಯ ತಿಂಡಿ ತಿನ್ನುವುದನ್ನು ಮೆರೆಯಬೇಡಿ. ಅದು ಚಿಕ್ಕ ಹಣ್ಣಿನ ತುಂಡಾದರೂ ಸರಿ, ದಿನದ ಕೆಲಸಗಳಿಗಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಚುರುಕುಗೊಳಿಸಬೇಕು.

ಹಾಸಿಗೆಯಲ್ಲಿ ಮಲಗುವುಕ್ಕೂ ಮುಂಚೆ ಕನಿಷ್ಟ 2 ತಾಸುಗಳ ಅಂತರದಲ್ಲಿ ಊಟ ಮಾಡಿ.

ಜಿಮ್ ಗೆ ತೆರಳಿ ಭಾರ ಎತ್ತುವುದೂ ಕೂಡ ಸರಿಯಾದ ಆಕಾರ ಪಡೆಯಲು ಸಹಕಾರಿ. ಕಡಿಮೆ ಭಾರದ ಜೊತೆ ಇದನ್ನು ಪುನರಾವರ್ತಿಸಿದರೆ, ನಿಮ್ಮ ಸ್ನಾಯುಗಳಿಗೆ ಹೆಚ್ಚಿನ ತಾಕತ್ತು ಬರುತ್ತದೆ.

ಕಡಿಮೆ ಕೊಬ್ಬಿನಂಶವಿರುವ ಹಾಲು ಅಥವಾ ಸೋಯಾ ಮಿಲ್ಕ ಕುಡಿಯಿರಿ.

ಹೆಚ್ಚೆಚ್ಚು ನೀರು ಕುಡಿಯುವುದು ನಿಮ್ಮ ದೇಹದ ಜೀವಕೋಶಗಳಿಗೆ ಒಳ್ಳೆಯದು. ಇದು ಹಾನಿಕಾರಕ ಅಂಶಗಳಿದ್ದರೆ ದೇಹದಿಂದ ಹೊರಹಾಕಲು ಸಹಾಯಕಾರಿ.

ಎಚ್ಚರಿಕೆಗಳು:

ನೀವೇನಾದರೂ ಅತಿಹೆಚ್ಚು ತೂಕವನ್ನು ಹೊಂದಿದ್ದು ಬೇರೇ ಆರೋಗ್ಯ ಸ್ಥಿತಿಯಲ್ಲಿ ಏರುಪೇರಿದ್ದರೆ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.ಇದೊಂದು ನಿಧಾನ ಪ್ರಕ್ರಿಯೆಯಾಗಿದ್ದು ಮೊದಲೆರಡು ವಾರದಲ್ಲಿ 8-10 ಎಲ್ಬಿಎಸ್ ಇಳಿಸಲು ಬಯಸಿ. ನಂತರದಲ್ಲಿ 1-2ಎಲ್ಬಿಎಸ್ ಕಡಿಮೆಗೊಳಿಸಲು ಬಯಸಿ.

ಯಾವತ್ತೂ ಹೊಟ್ಟೆಗಿಲ್ಲದೇ ಇರಬೇಡಿ. ತೂಕ ಕಡಿಮೆ ಮಾಡಲು ಉಪವಾಸ ಸರಿಯಾದ ಮಾರ್ಗವೇ ಅಲ್ಲ. ಒಮ್ಮೆ ನಿಮ್ಮ ದೇಹ ಉಪವಾಸದ ಸ್ಥಿತಿಗೆ ಹೋರೆ ಹೆಚ್ಚೆಚ್ಚು ಕೊಬ್ಬಿನಂಶ ಶೇಖರಣೆಯಾಗುತ್ತದೆ.

English summary

How To Get The Most Effective Diet | Tips For Diet | ಡಯಟ್ ಅನ್ನು ಪರಿಣಾಮಕಾರಿಯಾಗಿ ಮಾಡುವುದು ಹೇಗೆ? | ಡಯಟ್ ಗಾಗಿ ಕೆಲ ಸಲಹೆಗಳು

Old diets Not working? Try this; it's proven to work! Just remember it is not a quick fix!
 
X
Desktop Bottom Promotion