For Quick Alerts
ALLOW NOTIFICATIONS  
For Daily Alerts

ಎಣ್ಣೆಯುಕ್ತ ತ್ವಚೆಯವರಿಗಾಗಿ ಸುಕ್ಕುನಿವಾರಕ ಸಲಹೆಗಳು

By Super
|

ಎಣ್ಣೆ-ತ್ವಚೆಯ ಮಹಿಳೆಯರು, ಸಾಮಾನ್ಯ ಮತ್ತು ಶುಷ್ಕ ತ್ವಚೆಯ ಮಹಿಳೆಯರಿಗೆ ಹೋಲಿಸಿದರೆ ಕಡಿಮೆ ರೇಖೆಗಳು ಮತ್ತು ಸುಕ್ಕುಗಳನ್ನು ಹೊಂದಿರುತ್ತಾರೆ.ಇದು ಎಣ್ಣೆಯುಕ್ತ ತ್ವಚೆಯವರಿಗಿರುವ ಒಂದು ಪ್ಲಸ್ ಪಾಯಿಂಟ್, ಆದರೆ ವಯಸ್ಸಿಗೆ ತ್ವಚೆಯ ಬೇಧಬಾವವಿಲ್ಲ. ಹೆಚ್ಚಿಲ್ಲದಿದ್ದರೂ ಸ್ವಲ್ಪ ಸ್ವಲ್ಪವಾಗಿ ವಯಸ್ಸು ನಮ್ಮ ಮುಖದ ಮೇಲೆ ಗೋಚರವಾಗುತ್ತಾ ಹೋಗುತ್ತದೆ.

ಇದನ್ನು ತಡೆಗಟ್ಟುವುದು ಹೇಗೆ? ಎಂಬುದನ್ನು ಈ ಕೆಳಗೆ ಹೇಳಲಾಗಿದೆ.

1. ನಿಯಮಿತವಾಗಿ ಸನ್ ಸ್ಕ್ರೀನ್ ಲೇಪಿಸಿಕೊಳ್ಳಿ

1. ನಿಯಮಿತವಾಗಿ ಸನ್ ಸ್ಕ್ರೀನ್ ಲೇಪಿಸಿಕೊಳ್ಳಿ

ಯಾವುದೇ ರೀತಿಯ ತ್ವಚೆಯಿದ್ದರೂ, ಸನ್ ಸ್ಕ್ರೀನ್ ಲೇಪನೆ ಅತ್ಯಗತ್ಯವಾಗಿರುತ್ತದೆ. ಸೂರ್ಯನ ಪ್ರಖರವಾದ ಕಿರಣಗಳಿಂದ ನಿಮ್ಮ ತ್ವಚೆಗೆ ಹಾನಿಯಾಗಬಾರದಿದ್ದರೆ, ಈಗಲೇ ಸನ್ ಸ್ಕ್ರೀನ್ ಬಳಕೆ ಆರಂಭಿಸುವುದೊಳಿತು. ಇದು ನಿಮ್ಮ ತ್ವಚೆಯನ್ನು ಸೂರ್ಯ ಕಿರಣಗಳಿಂದ ರಕ್ಷಿಸುವದಲ್ಲದೇ ನೀಮ್ಮನ್ನು ತಾರುಣ್ಯಯುತವಾಗಿ ಕಾಣುವಂತೆ ಮಾಡುತ್ತದೆ. ಅಲ್ಲದೆ ಬಹು ಮುಖ್ಯವಾಗಿ, ಎಣ್ಣೆ ತ್ವಚೆಯವರು ಸನ್ ಸ್ಕ್ರೀನ್ ಬಳಸುವದರಿಂದ ತ್ವಚೆಯ ಮೇಲಿನ ರಂಧ್ರಗಳು ಮುಚ್ಚಿಹೋಗುವುದನ್ನು ತಪ್ಪಿಸಬಹುದು.

2. ಮೇಲಿಂದ ಮೇಲೆ ನಿಮ್ಮ ಮುಖ ತೊಳೆಯಬೇಡಿ

2. ಮೇಲಿಂದ ಮೇಲೆ ನಿಮ್ಮ ಮುಖ ತೊಳೆಯಬೇಡಿ

ದಿನದಲ್ಲಿ 3-4 ಬಾರಿ ಮುಖ ತೊಳೆಯುವುದು ಒಳ್ಳೆಯದು. ನೀವೇನೋ , ನಿಮ್ಮ ತ್ವಚೆಯು ಸ್ವಚ್ಛವಾಗಿ, ತಾಜಾ ಆಗಿ ಮತ್ತು ತೈಲ ಮುಕ್ತವಾಗಿರಬೇಕೆಂದು ಬಯಸಿ ಮುಖವನ್ನು ಅನೇಕ ಬಾರಿ ತೊಳೆಯುತ್ತಿರುತ್ತೀರಿ ಆದರೆ ವಾಸ್ತವವಾಗಿ ದಿನವೊಂದಕ್ಕೆ ಅನೇಕ ಭಾರಿ ಮುಖ ತೊಳೆಯುವುದು ಮಾಡುವುದರಿಂದ ನಿಮ್ಮ ತ್ವಚೆಯಲ್ಲಿಯ ತೈಲ ಉತ್ಪಾದನೆ ಹೆಚ್ಚುತ್ತದೆ. ನೀವು ದಿನಕ್ಕೆ ಎರಡು ಬಾರಿ ಮುಖ ತೊಳೆದರೆ ಸಾಕು. ಹಗಲಿನಲ್ಲಿ ಜಿಡ್ಡಿನಂಶದಿಂದ ತ್ವಚೆಯನ್ನು ಮುಕ್ತಗೊಳಿಸಲು ಬ್ಲೋಟಿಂಗ ಪೇಪರನ್ನು ಬಳಸಬಹುದು.

3. ತ್ವಚೆಯನ್ನು ಪೋಷಿಸಿರಿ

3. ತ್ವಚೆಯನ್ನು ಪೋಷಿಸಿರಿ

ನಿಯಮಿತ ಚರ್ಮದ ಆರೈಕೆಯಲ್ಲಿ ಸೇರಿಸಿಕೊಳ್ಳಲೇ ಬೇಕಾದಂತಹ ಅಂಶವೆಂದರೆ antioxidants. antioxidants ಇರುವ ತೈಲರಹಿತ ಮಾಯಿಶ್ಚರೈಸರ್ ಗಳನ್ನು ಬಳಸಿ. ಆರೋಗ್ಯವಂತ ತ್ವಚೆಗಾಗಿ ಹಣ್ಣುಗಳು, ಕಾಳುಗಳು ಮತ್ತು ತರಕಾರಿಗಳನ್ನೊಳಗೊಂಡ ಪಥ್ಯವನ್ನು ಮಾಡಲೇಬೇಕು.

4. ಸಾಕಷ್ಟು ನಿದ್ರೆ, ಫ್ರೆಶ್ ಆಗಿ ಎದ್ದೇಳಿ

4. ಸಾಕಷ್ಟು ನಿದ್ರೆ, ಫ್ರೆಶ್ ಆಗಿ ಎದ್ದೇಳಿ

ನಿದ್ರೆ, ನಿಮ್ಮ ತ್ವಚೆಗೆ ಮಾತ್ರವಲ್ಲದೇ ನಿಮ್ಮ ಸಂಪೂರ್ಣ ಆರೋಗ್ಯಕ್ಕೆ ತುಂಬಾ ಮುಖ್ಯ. ಹಾಗೆಂದ ಮಾತ್ರಕ್ಕೆ ನೀವು ಇಡೀ ದಿನ ಮಲಗಿರಬೇಕೆಂದಲ್ಲಾ, ಕೇವಲ 8 ರಿಂದ 9 ಗಂಟೆ ಗಳ ಕಾಲ ಸಮರ್ಪಕ ನಿದ್ರೆ ಮಾಡಿದರೆ ಸಾಕು. ಹಾಗೆಯೇ, ನೀವು ಮಲಗುವಾಗ ಅಂಗಾತ ಅಥವಾ ಮಗ್ಗುಲಲ್ಲಿ ಮಲಗುವುದು ಉತ್ತಮ. ಮುಖವನ್ನು ದಿಂಬಿಗೆ ಅಥವಾ ನೆಲಕ್ಕೆ ಹಚ್ಚಿ ಮಲಗುವುದರಿಂದ ಮುಖದ ಚರ್ಮ ಸುಕ್ಕುಗಟ್ಟಿ ವಯಸ್ಸಾದಂತೆ ಕಾಣುವಿರಿ.

5. ಒಮೆಗಾ -3 ಕೊಬ್ಬಿನ ಆಮ್ಲಗಳನ್ನು ಸೇವಿಸಿರಿ

5. ಒಮೆಗಾ -3 ಕೊಬ್ಬಿನ ಆಮ್ಲಗಳನ್ನು ಸೇವಿಸಿರಿ

ಒಮೆಗಾ -3 ಕೊಬ್ಬಿನಂಶವಿರುವ ಆಮ್ಲಗಳು ನಿಮ್ಮ ಚರ್ಮವನ್ನು ಒಳಗಿನಿಂದ ದುರಸ್ತಿಮಾಡುವವು. ಮೀನುಗಳು , ಮೊಟ್ಟೆಗಳು, ಸೋಯಾ ಹಾಲು ಮತ್ತು ಮೊಸರು ಗಳಂತಹ ಒಮೆಗಾ 3 ಕೊಬ್ಬಿನ ಆಮ್ಲಗಳು ಯಥೇಚ್ಚವಾಗಿರುವ ಅಹಾರವನ್ನು ಸೇವಿಸಬೇಕು. ಅವು ಅತ್ಯಂತ ರುಚಿಕರವೂ ನಿಮ್ಮ ಚರ್ಮಕ್ಕೆ ಲಾಭಕಾರಕವೂ ಆಗಿವೆ.

7. ಸರಿಯಾದ ಸೌಂದರ್ಯವರ್ಧಕಗಳ ಆಯ್ಕೆ

7. ಸರಿಯಾದ ಸೌಂದರ್ಯವರ್ಧಕಗಳ ಆಯ್ಕೆ

ಎಣ್ಣೆಯುಕ್ತ ತ್ವಚೆಯಿರುವವರು ತಮ್ಮ ಸೌಂದರ್ಯವರ್ಧಕಗಳು ಮತ್ತು ಸುಕ್ಕುನಿವಾರಕ ಕ್ರೀಮ್ ಗಳಿಂದ ತಮ್ಮ ಮುಖ ಇನ್ನಷ್ಟು ಜಿಡ್ಡುಜಿಡ್ಡಾಗಿ ಮತ್ತು ಮುಚ್ಚಿಹೋದಂತೆ ಕಾಣುತ್ತವೆ ಎಂದು ದೂರುತ್ತಾರೆ. ಅದೃಷ್ಟವಶಾತ್, ವಾಸ್ತವವಾಗಿ ಎಲ್ಲಾ ರೀತಿಯ ಸೌಂದರ್ಯವರ್ಧಕಗಳು ಹಾಗೂ ಸುಕ್ಕುನಿವಾರಕ ಕ್ರೀಮ್ಗಳನ್ನು 'ಎಣ್ಣೆಯುಕ್ತ ಚರ್ಮ' ದವರನ್ನು ಗಮನದಲ್ಲಿಟ್ಟುಕೊಂಡೇ ತಯಾರಿಸಲಾಗಿರುತ್ತದೆ. ನಿಮ್ಮ ತ್ವಚೆಗೆ ಸರಿಯಾದ ಉತ್ಪನ್ನಗಳನ್ನು ಕಂಡುಹಿಡಿಯಲು ಸ್ವಲ್ಪ ಹೆಚ್ಚುವರಿ ಸಮಯವನ್ನು ವ್ಯಯಿಸಿ ಯಾವುದೇ ರೀತಿಯ ಹಾನಿಯ ಭಯವಿಲ್ಲದಂತಹ ಆರೋಗ್ಯಕರ ಮತ್ತು ತೇವಾಂಶವುಳ್ಳ ಸೌಂದರ್ಯವರ್ಧಕಗಳನ್ನು ಆಯ್ಕೆ ಮಾಡಿಕೊಳ್ಳಿ.

8. ಆರೋಗ್ಯಕರ ಆಹಾರ

8. ಆರೋಗ್ಯಕರ ಆಹಾರ

ಎಣ್ಣೆ-ತ್ವಚೆಯವರು ಇಲ್ಲಿ ಪಟ್ಟಿ ಮಾಡಿರುವ ಕೆಲವು ಸಲಹೆಗಳು ಅನುಸರಿಸುವ ಮೂಲಕ ತಮ್ಮ ತ್ವಚೆಗೆ ಸ್ವಲ್ಪಮಟ್ಟಿಗೆ ರಕ್ಷಣೆ ಒದಗಿಸಬಹುದಾದರೂ ಇದು ಆಂತರಿಕವಾಗಿ ಹೆಚ್ಚುತ್ತಿರುವ ವಯಸ್ಸಿನ ಮೇಲೆ ಏನೂ ಪರಿಣಾಮ ಬೀರಲಾರದು. ನೀವು ನಿರಂತರವಾಗಿ ಅನಾರೋಗ್ಯಕರ ಆಹಾರ ಸೇವಿಸುತ್ತಿದ್ದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸದಿದ್ದಲ್ಲಿ ನೀವು ಈಗಿರುವುದಕ್ಕಿಂತಲೂ ಹೆಚ್ಚು ವಯಸ್ಕರಾಗಿ ಗೋಚರಿಸುವಿರಿ. ಒಟ್ಟಾರೆ ಆರೋಗ್ಯಕರ ಆಹಾರ ಸೇವನೆಯಿಂದ ನೀವು ದೀರ್ಘಕಾಲ ಸುಂದರವಾಗಿ ಕಾಣಬಹುದು.

9. ಮದ್ಯ ಸೇವನೆ

9. ಮದ್ಯ ಸೇವನೆ

ಅಧಿಕ ಮದ್ಯಪಾನ ನಿಮ್ಮ ರಕ್ತನಾಳಗಳನ್ನು ಸಡಿಲಗೊಳಿಸುವದಲ್ಲದೇ, ಚರ್ಮದ ಮೇಲ್ಮೈ ಬಳಿ ರಕ್ತ ಹರಿವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಚರ್ಮವು ತಿಳಿ-ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಮದ್ಯಪಾನ ಸೇವನೆಯನ್ನು ಮಿತಗೊಳಿಸುವುದು ಅತಿ ಮುಖ್ಯ.

ಈ ಸಲಹೆಗಳು ಮುಖದ ಮೇಲೆ ಗೋಚರಿಸುವ ನಿಮ್ಮ ವಯೋಮಿತಿಯನ್ನು ತಗ್ಗಿಸುವಲ್ಲಿ ಖಂಡಿತ ಸಹಕಾರಿಯಾಗಬಲ್ಲವು. Go ahead.....

English summary

Anti ageing tips for oily skin | Tips for skin care | ಎಣ್ಣೆಯುಕ್ತ ತ್ವಚೆಯವರಿಗಾಗಿ ಸುಕ್ಕುನಿವಾರಕ ಸಲಹೆಗಳು | ತ್ವಚೆ ಆರೈಕೆಗೆ ಕೆಲ ಸಲಹೆಗಳು

Oily skinned women have typically less lines and wrinkles visible as compared to women with normal and dry skin. Though there are a few benefits of having oily skin, here's how you can prevent your skin from ageing faster
X
Desktop Bottom Promotion