For Quick Alerts
ALLOW NOTIFICATIONS  
For Daily Alerts

ಮನೆ ಛಾವಣಿ ಶುಚಿಗೊಳಿಸಲು ಏಳು ವಿಧಾನಗಳು

By Super
|

ಮನೆಯನ್ನು ಅಂದಚಂದದ ಫರ್ನಿಚರ್ ಮತ್ತು ಪರಿಕರಗಳಿಂದ ಶೃಂಗರಿಸಲು ಪ್ರತಿಯೊಬ್ಬರು ಬಯಸುತ್ತಾರೆ. ಅವರು ಮನೆಯನ್ನು ಸ್ವಚ್ಛಗೊಳಿಸಿ ನೆಲವು ತುಂಬಾ ಸ್ವಚ್ಛ ಮತ್ತು ಹೊಳೆಯುವಂತೆ ಮಾಡುತ್ತಾರೆ. ಆದರೆ ಎಲ್ಲವೂ ಸ್ವಚ್ಛವಾಗಿದ್ದು, ಮನೆಯ ಛಾವಣೆ ಶುಚಿಯಾಗಿಲ್ಲವೆಂದಾದರೆ ಯಾವುದೇ ಪ್ರಯೋಜನವಿಲ್ಲ. ಛಾವಣಿ ಕೂಡ ಮನೆಯ ಒಂದು ಪ್ರಮುಖ ಭಾಗ. ಛಾವಣೆ ಶುಚಿಗೊಳಿಸುವುದು ಕೂಡ ತುಂಬಾ ಮುಖ್ಯ. ಸ್ವಚ್ಛವಿಲ್ಲದೆ ಮತ್ತು ಪಾಚಿ ಹೊಂದಿರುವ ಮನೆಯ ಛಾವಣೆ ಇರಲೇಬಾರದು. ನೀವು ಮನೆ ಸ್ವಚ್ಛ ಮಾಡುವಾಗ ಮನೆಯ ಛಾವಣೆ ಸ್ವಚ್ಛ ಮಾಡುವುದನ್ನು ಮರೆಯಬೇಡಿ.

ಕೆಲವರು ಮನೆಯ ಛಾವಣಿ ಮನೆಯ ಭಾಗವಲ್ಲವೆಂದು ಭಾವಿಸಿದಂತಿರುತ್ತದೆ. ಇದರಿಂದಾಗಿ ಅವರು ಛಾವಣಿಯನ್ನು ಸ್ವಚ್ಛಗೊಳಿಸಲು ಹೋಗುವುದೇ ಇಲ್ಲ ಮತ್ತು ಅಲ್ಲಿನ ಸ್ಥಿತಿ ಹೇಗಿದೆ ಎಂದು ನೋಡುವುದೇ ಇಲ್ಲ. ಇಂದಿನ ದಿನಗಳಲ್ಲಿ ಛಾವಣಿಯನ್ನು ಶುಚಿಗೊಳಿಸುವುದು ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿದೆ ಮತ್ತು ಇದಕ್ಕಾಗಿಯೇ ಕೆಲವು ಮಂದಿ ಇದ್ದಾರೆ. ಛಾವಣೆ ಸ್ವಚ್ಛಗೊಳಿಸಲು ನೀವು ಪ್ರಯತ್ನಿಸುವುದಾದರೆ ಹಲವಾರು ಸರಳ ಮತ್ತು ಪರಿಣಾಮಕಾರಿ ವಿಧಾನಗಳು ಇಲ್ಲಿವೆ.

7 Ways to clean your roof

ಛಾವಣಿ ಸ್ವಚ್ಛಗೊಳಿಸಲು ನಿಮಗೆ ನೆರವಾಗುವಂತಹ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

1. ನೀರು ಚಿಮ್ಮಿಸಿ
ಛಾವಣಿ ಮೇಲೆ ಇರುವಂತಹ ಕೊಳೆ ಮತ್ತು ಧೂಳನ್ನು ತೆಗೆಯಲು ನೀವು ಒತ್ತಡದಿಂದ ನೀರನ್ನು ಚಿಮ್ಮಿಸಬೇಕು. ಇದರಿಂದ ಛಾವಣಿ ಮೇಲಿರುವ ಕೊಳೆ ಮತ್ತು ಇತರ ಕಸಕಡ್ಡಿಗಳು ಕೆಳಗೆ ಬೀಳುತ್ತದೆ. ಛಾವಣಿ ಸ್ವಚ್ಛಗೊಳಿಸಲು ನೀರನ್ನು ಒತ್ತಡದಿಂದ ಚಿಮ್ಮಿಸುವುದು ಅತ್ಯಂತ ಒಳ್ಳೆಯ ವಿಧಾನ

2. ಕೈಯಿಂದ ಸ್ವಚ್ಛಗೊಳಿಸುವುದು
ಛಾವಣಿಯಲ್ಲಿ ಸ್ವಲ್ಪ ಮಟ್ಟಿನ ಧೂಳು ಮತ್ತು ಕಸಕಡ್ಡಿಯಿದ್ದರೆ ಆಗ ಕೈಯಿಂದ ಸ್ವಚ್ಛಗೊಳಿಸುವುದು ತುಂಬಾ ಒಳ್ಳೆಯ ಹಾಗೂ ಕಡಿಮೆ ವೆಚ್ಚದ ವಿಧಾನ. ಶುಚಿಗೊಳಿಸಿದ ಬಳಿಕ ಛಾವಣಿಯನ್ನು ನಿರ್ವಹಿಸಲು ಇದು ಒಳ್ಳೆಯ ವಿಧಾನ

3. ಪಾಚಿಗಳನ್ನು ಕೆರೆದು ತೆಗೆಯುವುದು
ಪಾಚಿಗಳನ್ನು ತೆಗೆಯಲು ಒಳ್ಳೆಯ ವಿಧಾನವೆಂದರೆ ಛಾವಣಿಯನ್ನು ಕೆರೆದು ತೆಗೆಯುವುದು. ಇದಕ್ಕಾಗಿ ಹೆಚ್ಚಿನ ಶ್ರಮ ಮತ್ತು ಸಮಯ ಬೇಕಾಗುತ್ತದೆ. ಆದರೆ ಇದು ಪರಿಣಾಮಕಾರಿ ವಿಧಾನ. ಇದರಿಂದ ಛಾವಣಿಯಲ್ಲಿರುವ ಎಲ್ಲಾ ಪಾಚಿ ಹೋಗುತ್ತದೆ. ಕೆರೆದ ಬಳಿಕ ಕೆಲವೊಂದು ರಾಸಾಯನಿಕ ಸಿಂಪಡಿಸಿದರೆ ಪಾಚಿ ಬೆಳೆಯದು.

4. ಕ್ಲೋರಿನ್ ವಾಷಿಂಗ್
ಕ್ಲೋರಿನ್ ನಲ್ಲಿ ಸೋಂಕು ನಿವಾರಕ ಮತ್ತು ಶುಭ್ರಗೊಳಿಸುವ ಗುಣಗಳಿವೆ. ಇದರಿಂದ ಇದನ್ನು ಛಾವಣಿ ಸ್ವಚ್ಛಗೊಳಿಸಲು ಬಳಸಬಹುದು. ಕ್ಲೋರಿನ್ ರಾಸಾಯನಿಕವಾಗಿರುವ ಕಾರಣ ಇದನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಸಂಪೂರ್ಣ ಛಾವಣಿ ಶುಚಿಗೊಳಿಸಲು ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣ ಬಳಸಲಾಗುತ್ತದೆ. ಇದರಿಂದ ಪಾಚಿ ಎದ್ದು ಹೋಗುತ್ತದೆ ಮತ್ತು ಕೊಳೆ ನಾಶವಾಗುತ್ತದೆ.

5. ಹಸಿರು ವಿಧಾನ
ಮನೆ ಛಾವಣಿ ಸ್ವಚ್ಛಗೊಳಿಸಲು ಹಸಿರು ಮತ್ತು ಪರಿಸರ ಸ್ನೇಹಿ ವಿಧಾನವೆಂದರೆ ಬ್ಲೀಚ್ ಇಲ್ಲದ ರಾಸಾಯನಿಕ ಮತ್ತು ಪದಾರ್ಥಗಳನ್ನು ಬಳಸುವುದು. ಇಂತಹ ರಾಸಾಯನಿಕ ಅಥವಾ ಶಾಂಪೂ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ತುಂಬಾ ಸುರಕ್ಷಿತ ಮತ್ತು ಛಾವಣಿಗಳಿಗೆ ಬಳಸಬಹುದು. ಬ್ಲೀಚ್ ಇಲ್ಲದ ರಾಸಾಯನಿಕಗಳು ಕೂಡ ಪಾಚಿ, ಕಲ್ಲುಹೂವುಗಳನ್ನು ತೆಗೆಯುತ್ತದೆ.

6. ಪೊರಕೆ ವಿಧಾನ
ಛಾವಣಿಯಲ್ಲಿ ಭಗ್ನಾವಶೇಷ ಹೆಚ್ಚಾಗಿದ್ದರೆ, ಪಾಚಿ ಮತ್ತು ಕಲೆಗಳು ಕಡಿಮೆಯಿದ್ದರೆ ಆಗ ನೀವು ಸರಳ ಮತ್ತು ಮಿತವ್ಯಯಿ ವಿಧಾನವಾಗಿರುವ ಪೊರಕೆಯನ್ನು ಛಾವಣಿ ಶುಚಿಗೊಳಿಸಲು ಬಳಸಬಹುದು. ಛಾವಣಿಯಲ್ಲಿ ಕೊಳೆ, ಧೂಳು ಮತ್ತು ಒಣ ಎಲೆಗಳು ಇತ್ಯಾದಿ ಇದ್ದರೆ ಮಾತ್ರ. ಛಾವಣೆ ಶುಚಿಗೊಳಿಸಲು ಪೊರಕೆ ಒಳ್ಳೆಯ ವಿಧಾನ

7. ವೃತ್ತಿಪರರ ನೆರವು
ಛಾವಣೆ ತುಂಬಾ ಕೆಟ್ಟು ಹೋಗಿ ನಿಮಗೆ ಶುಚಿಗೊಳಿಸಲು ಸಾಧ್ಯವಿಲ್ಲವೆಂದಾರೆ ಆಗ ನೆರವು ಪಡೆಯಿರಿ. ಸ್ವಲ್ಪ ಹಣ ವೆಚ್ಚ ಮಾಡಿದರೆ ಛಾವಣಿ ಸ್ವಚ್ಛ ಮಾಡುವ ವೃತ್ತಿಪರರು ನಿಮಗೆ ಸಿಗುತ್ತಾರೆ. ಮನೆಯ ಛಾವಣೆಯ ನಿರ್ವಹಣೆಗೆ ಸಮಯವಿಲ್ಲದ ವ್ಯಕ್ತಿಗಳಿಗೆ ಇದು ಒಳ್ಳೆಯ ಆಯ್ಕೆ.

English summary

7 Ways to clean your roof

People often decorate their houses with beautiful furniture and accessories. They clean their houses speck and clean. The floors are always shiny and bright. But all this effort and cleaning goes down the flush if your top is unclean. The roof is also an integral part of the house.
Story first published: Thursday, December 19, 2013, 11:01 [IST]
X
Desktop Bottom Promotion